ನವದೆಹಲಿ- ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳ ವಿರುದ್ಧ ಕೋಟ್ಯಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ವಿಕೆ ಸಿಂಗ್ ಪ್ರತಿಭಟನೆ ನಡೆಸುತ್ತಿರುವವರಲ್ಲಿ ಬಹುತೇಕರು ರೈತರಂತೆ ಕಾಣುತ್ತಿಲ್ಲ ಎಂದಿದ್ದಾರೆ. ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಚಿತ್ರಗಳಲ್ಲಿ ಕಾಣುತ್ತಿರುವವರ ಪೈಕಿ ಅನೇಕರು ರೈತರಂತೆ ಇಲ್ಲ. ರೈತರ ಹಿತದೃಷ್ಟಿಯಿಂದ ಇದು ನಡೆಯುತ್ತಿಲ್ಲ. ಕಾಯ್ದೆಗಳನ್ನು ವಿರೋಧ ಮಾಡುವವರಿಗಿಂತ ಹೆಚ್ಚಾಗಿ ಕಮಿಷನ್ ಪಡೆಯುವವರು ಇದರ ಹಿಂದಿದ್ದಾರೆ ಎಂದು ಕೇಂದ್ರ ಸಚಿವ ವಿ ಕೆ ಸಿಂಗ್ ಹೇಳಿದ್ದಾರೆ
PublicNext
02/12/2020 10:09 am