ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೈಲಿಂದಲೇ ಸರ್ಕಾರ ಕೆಡವಲು ಲಾಲೂ ಪ್ಲ್ಯಾನ್

ಪಾಟ್ನಾ- ಆರ್ ಜೆ ಡಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಲಾಲೂ ಪ್ರಸಾದ್ ಯಾದವ್ ಸದ್ಯ ಸೆರೆವಾಸದಲ್ಲಿದ್ದಾರೆ‌‌. ಅಲ್ಲಿಂದಲೇ ಬಿಹಾರ ಸರ್ಕಾರ ಕೆಡವಲು ಪ್ಲ್ಯಾನ್ ಹಾಕಿದ್ದಾರೆ ಎಂಬ ಮಾತು ಅಲ್ಲಿನ ರಾಜಕೀಯ ವಲಯಲ್ಲಿ ಕೇಳಿ ಬಂದಿದೆ.

ತಮ್ಮ ಪುತ್ರ ತೇಜಸ್ವಿ ಯಾದವ್ ನೇತೃತ್ವದಲ್ಲಿ ಆರ್ ಜೆ ಡಿ ಪಕ್ಷ ಈ ಬಾರಿ ವಿಧಾನಸಭಾ ಚುನಾವಣೆ ಎದುರಿಸಿತ್ತು‌. ಇನ್ನೇನು ಸಂಪೂರ್ಣ ಬಹುಮತದ ಕದ ತಟ್ಟಬೇಕಿದ್ದ ಆರ್ ಜೆ ಡಿ ಕೊನೆ ಕ್ಷಣದಲ್ಲಿ ಅಧಿಕಾರವಂಚಿತವಾಯಿತು‌. ಹೀಗಾಗಿ ಲಾಲೂ ಅವರು ಅಲ್ಲಿನ ಎನ್ ಡಿ ಎ ಮೈತ್ರಿಕೂಟದ ಶಾಸಕರನ್ನು ತಮ್ಮತ್ತ ಸೆಳೆದು ಸರ್ಕಾರ ರಚಿಸುವ ಪ್ಲ್ಯಾನ್ ಹಾಕಿದ್ದಾರೆ ಎನ್ನಲಾಗಿದೆ.

ಹೀಗಂತಾ ಆರೋಪಿಸಿ ಎನ್ ಡಿ ಎ ಮೈತ್ರಿಕೂಟದ ಸುಶೀಲ್ ಕುಮಾರ್ ಮೋದಿ ಟ್ವೀಟ್ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

25/11/2020 01:57 pm

Cinque Terre

103.68 K

Cinque Terre

4

ಸಂಬಂಧಿತ ಸುದ್ದಿ