ಬೆಂಗಳೂರು- ರಾಜ್ಯದಲ್ಲಿ ಕಾರ್ಯಾಂಗದ ಚುಕ್ಕಾಣಿ ಹಿಡಿದಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ ಅವರು ಡಿಸೆಂಬರ್ 31ರಂದು ನಿವೃತ್ತಿಯಾಗಲಿದ್ದಾರೆ. ಸೇವಾ ಜೇಷ್ಟಾತೆಯ ಆಧಾರದ ಮೇಲೆ ಮುಂದಿನ ಕಾರ್ಯದರ್ಶಿಯಾಗಿ ಪಿ ರವಿಕುಮಾರ್ ನೇಮಕವಾಗುವ ಸಾಧ್ಯತೆ ಇದೆ.
ಸಿಎಮ್ ಯಡಿಯೂರಪ್ಪ ಅವರಿಗೆ ರವಿಕುಮಾರ್ ಅವರ ಮೇಲೆ ವಿಶ್ವಾಸವಿದೆ. ಕಳೆದ 2 ತಿಂಗಳ ಹಿಂದಿನವರೆಗೂ ರವಿಕುಮಾರ್, ಸಿಎಂ ಕಚೇರಿಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾದರೆ ರವಿ ಕುಮಾರ್ ಅವರ ಸೇವಾ ಅವಧಿ ಇನ್ನೂ ಒಂದುವರೆ ವರ್ಷಗಳ ಅವಧಿಗೆ ವಿಸ್ತರಣೆಯಾಗಲಿದೆ.
ರಾಜ್ಯ ಸರ್ಕಾರ ತನ್ನ ವಿವೇಚನಾಧಿಕಾರ ಬಳಸಿ ಹಾಲಿ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಅವರ ಸೇವಾವಧಿ ವಿಸ್ತರಣೆ ಮಾಡಬಹುದು. ಈ ಹಿಂದೆ ಇದೇ ಹುದ್ದೆಯಲ್ಲಿದ್ದ ಕೆ. ರತ್ನ ಪ್ರಭಾ ಅವರ ಸೇವಾವಧಿಯನ್ನೂ ಮೂರು ತಿಂಗಳ ಕಾಲ ವಿಸ್ತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
PublicNext
21/11/2020 04:14 pm