ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತಾಂತರ ಆಗೋದು ವೈಯಕ್ತಿಕ ವಿಷಯ: ಸಿ ಟಿ ರವಿ ಮೇಲೆ ಸಿದ್ದರಾಮಯ್ಯ ಸಿಡಿಮಿಡಿ

ಬೆಂಗಳೂರು- ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಬಿಜೆಪಿ ಆರ್ ಎಸ್ ಎಸ್ ವಿರುದ್ಧ ಗುಡುಗಿದ್ದಾರೆ. ಅವರು ಇನ್ನೂ ಮನುಸ್ಮೃತಿಯಲ್ಲೇ ಇದ್ದಾರೆ. ಮದುವೆ ಆಗಲಿ, ಮತಾಂತರ ಆಗಲಿ ಅದು ಅವರವರ ವೈಯಕ್ತಿಕ ವಿಚಾರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಯಾರನ್ನ ಮದುವೆ ಆಗಬೇಕು ಎಂದು ಹೇಳೋಕೆ‌ ನೀವ್ಯಾರು? ನೀವು ಯಾರನ್ನು ತೋರಿಸುತ್ತೀರೋ ಅವರನ್ನೇ ಮದುವೆ ಆಗೋಕೆ ಸಾಧ್ಯವೇ? ಯಾರೂ ಯಾರನ್ನೂ ಬಲವಂತ ಮಾಡುವಂತಿಲ್ಲ. ಯಾರನ್ನ ಮದುವೆ ಅಗಬೇಕು ಅನ್ನೋದು ನನ್ನಿಷ್ಟ. ಇನ್ನೊಂದು ಧರ್ಮಕ್ಕೆ ಮತಾಂತರ ವೈಯಕ್ತಿಕ ನಿರ್ಧಾರ‌. ಅದನ್ನು ತಡೆಯಲು ಆಗಲ್ಲ‌ ಎಂದು ಹೇಳಿದರು.

ಇನ್ನು ಗೋ ಹತ್ಯೆ ವಿಚಾರವಾಗಿ ಸಿದ್ದರಾಮಯ್ಯ, ಸಚಿವ ಸಿ ಟಿ ರವಿ ಅವರ ಕಾಲೆಳೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಗೋಮಾಂಸ ರಫ್ತು ಮಾಡ್ತಾರೆ. ಅದು ಯಾವ ಪಕ್ಷದವರು ಅಂತಾ ಮೊದಲು ಹೇಳಲಿ ಆಮೇಲೆ ಗೋ ಹತ್ಯೆ ನಿಷೇಧ ಮಾಡಲಿ. ಇಲ್ಲಿ ಸಿ ಟಿ ರವಿ ಅವರು ಸುಮ್ಮನೇ ಬುರುಡೆ ಬಿಡುವುದು ಬೇಡ ಎಂದು ಕಿಡಿಕಾರಿದರು.

ನಾನು ಆರ್ ಎಸ್ ಎಸ್ ವಿರೋಧಿ. ಆರ್ ಎಸ್ ಎಸ್ ಬಗ್ಗೆ ನನಗೆ ಗೊತ್ತಿಲ್ಲ‌‌ ಎನ್ನುವ ಸಿ ಟಿ ರವಿ ಹೆಗ್ಡೆವಾರ್ ಜೊತೆ ಇದ್ನಾ? ಸಿ.ಟಿ ರವಿ ಆರ್‌ಎಸ್ಎಸ್‌ನ ಫೌಂಡರ್ ಮೆಂಬರಾ...? ಎಂದು ಇದೆ ವೇಳೆ ಮಾಜಿ ಸಿಎಂ ಪ್ರಶ್ನಿಸಿದ್ದಾರೆ. ಹೆಗ್ಡೆವಾರ್ ಕಾಂಗ್ರೆಸ್ ನಲ್ಲಿ ಇದ್ದವರು. ಗೋಲ್ವಾಲ್ಕರ್ ಆರ್‌ಎಸ್‌ಎಸ್ ಎರಡನೇ ಸರ ಸಂಗಚಾಲಕರು. ಇವರು ಎಲ್ಲಿದ್ದರು, ಕಾಂಗ್ರೆಸ್ ನಲ್ಲಿ ತಾನೇ. ಜನ ಸಂಘ ಇದ್ದಾಗ ಸಿಟಿ ರವಿ ಎಲ್ಲಿದ್ದ...? ಎಂದು ಏಕವಚನದಲ್ಲೇ ಕಿಡಿಕಾರಿದ್ದಾರೆ.

Edited By : Nagaraj Tulugeri
PublicNext

PublicNext

21/11/2020 03:57 pm

Cinque Terre

90.8 K

Cinque Terre

22

ಸಂಬಂಧಿತ ಸುದ್ದಿ