ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರ ಅಸ್ತು ಎಂದಿರುವ ಮರಾಠಾ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿ ಕನ್ನಡ ಪರ ಸಂಘಟನೆಗಳು ಡಿ.5 ರಂದು ಸಂಪೂರ್ಣ ಕರ್ನಾಟಕ ಬಂದ್ ಗೆ ಈಗಾಗಲೇ ಸಜ್ಜಾಗಿವೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಸವರಾಜ ಯತ್ನಾಳ ಇದು ರೋಲ್ ಕಾಲ್ ಹೋರಾಟ ಈ ಹೋರಾಟಕ್ಕೆ ಸಿಎಂ ಭಯ ಪಡಬೇಕಾಗಿಲ್ಲ, ಕನ್ನಡಿಗರ ವೋಟು ಹೋಗುವ ಯಾವುದೇ ಆತಂಕ ಇಲ್ಲಾ ಎಂದರು. ಕನ್ನಡ ಸಂಸ್ಕೃತಿ ಇಲಾಖೆಯಿಂದ ವಾಟಾಳ್ ನಾಗಾರಾಜ್ ಈ ಹೋರಾಟಕ್ಕೆ ಎಷ್ಟು ತಗೋಂಡ್ರು ? ಸರ್ಕಾರದ ಹಣವನ್ನು ಬೇರೆ ಸಂಘಟನೆಗಳಿಗೆ ನೀಡಿದ್ರಾ ? ಎಂದು ಪ್ರಶ್ನಿಸಿದರು.
ಇದಲ್ಲದೆ ನಾವು ಹಿಂದೂಗಳಾಗಿ ಉಳಿಯಲು ಶಿವಾಜಿ ಕಾರಣ ಶಿವಾಜಿ ಹುಟ್ಟದೆ ಇರದಿದ್ದರೆ, ಭಾರತ ಪಾಕಿಸ್ತಾನವಾಗಿತ್ತು. ಬೆಳಗಾವಿ ವಿಚಾರದಲ್ಲಿ ನಾನು ಶಿವಸೇನಾ, ಶರತ ಪವಾರ, ಅಜಿತ ಪವಾರನನ್ನು ವಿರೋಧಿಸುತ್ತೇನೆ. ಆದರೆ ಮರಾಠ ಸಮುದಾಯದ ದೊಡ್ಡ ಕೊಡುಗೆ ಶಿವಾಜಿ. ಮೈಸೂರಲ್ಲಿ ಮರಾಠರಿದ್ದಾರೆ. ನಾವು ಹಿಂದೂಗಳ ನಮ್ಮನ್ನ ರಕ್ಷಣೆ ಮಾಡಿದ ಮರಾಠಿಗರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಕೊಡಲು ನಾನು ಉತ್ಸುಕ ಎಂದರು. ಸಂಘಟನೆ ಅವ್ರು ಬರ್ಲಿ ಬಂದ್ ವಿಜಯಪುರ್ ಹೇಂಗ್ ಬಂದ್ ಮಾಡ್ತಾರ ನೋಡೋಣು ಎಂದರು.
PublicNext
21/11/2020 10:29 am