ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಚ್ಚಿದ ವಾಯುಮಾಲಿನ್ಯ: ಕೆಲ ದಿನ ದೆಹಲಿ ತೊರೆಯಲು ಸೋನಿಯಾ ಗಾಂಧಿಗೆ ಸಲಹೆ

ನವದೆಹಲಿ: ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದಾಗಿ ದೀರ್ಘಕಾಲದ ಎದೆಯ ಸೋಂಕಿನಿಂದ ಬಳಲುತ್ತಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಕೆಲ ದಿನ ದೆಹಲಿ ತೊರೆಯಲು ಸಲಹೆ ನೀಡಲಾಗಿದೆ.

ಕಾಂಗ್ರೆಸ್‌ ಮೂಲಗಳ ಪ್ರಕಾರ, ಸೋನಿಯಾ ಗಾಂಧಿ ಅವರು ಕೆಲವು ದಿನಗಳವರೆಗೆ ಗೋವಾ ಅಥವಾ ಚೆನ್ನೈಗೆ ಸ್ಥಳಾಂತರಗೊಳ್ಳಬಹುದು. ಶುಕ್ರವಾರ ಮಧ್ಯಾಹ್ನವೇ ದೆಹಲಿಯಿಂದ ತೆರಳುವ ಸಾಧ್ಯತೆಯಿದ್ದು, ಅವರೊಂದಿಗೆ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇರಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ದೆಹಲಿಯಲ್ಲಿ ಉಂಟಾಗಿರುವ ವಾಯುಮಾಲಿನ್ಯವು ಸೋನಿಯಾ ಗಾಂಧಿ ಅವರ ಆಸ್ತಮಾ ಮತ್ತು ಹೃದಯದ ಆರೋಗ್ಯ ಸ್ಥಿತಿಯನ್ನು ಮತಷ್ಟು ಉಲ್ಬಣಗೊಳಿಸಿದೆ. ಹಾಗಾಗಿ ಇದೀಗ ಅವರು ದೆಹಲಿಯಿಂದ ಸ್ವಲ್ಪ ಸಮಯದವರೆಗೆ ದೂರ ಉಳಿಯಲು ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Edited By : Vijay Kumar
PublicNext

PublicNext

20/11/2020 12:25 pm

Cinque Terre

71.58 K

Cinque Terre

0

ಸಂಬಂಧಿತ ಸುದ್ದಿ