ಬೆಂಗಳೂರು: ಜ್ಯೋತಿಷಿ ಮಾತು ಕೇಳಿದ ಪಾಪಿ ಗಂಡ ನವವಿವಾಹಿತ ಪತ್ನಿಗೆ ಕಿರುಕುಳ ನೀಡಿದ್ದು, ಪರಿಣಾಮ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಅಶ್ವಿನಿ(25) ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ. ನಗರದ ಹೆಣ್ಣೂರಿನಲ್ಲಿ ಘಟನೆ ನಡೆದಿದದೆ. ಪತಿ ಯುವರಾಜ್ ಕೊಟ್ಟ ಕಿರುಕುಳ ತಾಳಲಾರದೇ ಅಶ್ವಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಪತಿ ಜೊತೆಗೆ ಮನೆಯವರೆಲ್ಲ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಮಹಿಳೆ ಆತ್ಮಹತ್ಯೆ ಶರಣಾಗಿದ್ದಾಳೆ.
ಅಶ್ವಿನಿ ಕಳೆದ ಫೆಬ್ರವರಿಯಲ್ಲಿ ಯುವರಾಜ್‍ನನ್ನು ವಿವಾಹವಾಗಿದ್ದರು. ಆರಂಭದಲ್ಲಿ ಸಂಸಾರ ನೆಮ್ಮದಿಯಿಂದ ನಡೆದಿತ್ತು. ಆದರೆ ಈ ವೇಳೆ ಮನೆಗೆ ಬಂದ ಜ್ಯೋತಿಷಿಯೊಬ್ಬರು ಅಶ್ವಿನಿಗೆ ಮಕ್ಕಳಾಗಲ್ಲ ಎಂದು ಭವಿಷ್ಯ ನುಡಿದಿದ್ದರು. ಜ್ಯೋತಿಷಿಯ ಈ ಮಾತು ಯುವರಾಜ್ ಕುಟುಂಬಸ್ಥರಿಗೆ ಕಾಡುತ್ತಿತ್ತು. ಹೀಗಾಗಿ ಅಶ್ವಿನಿಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಅಶ್ವಿನಿ ಬೇಸತ್ತಿದ್ದರು.
ಪ್ರತಿದಿನ ಗಂಡನ ಮನೆಯವರ ಕಿರುಕುಳ ತಾಳಲಾರದೇ ಅಶ್ವಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
14/11/2020 08:15 pm