ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈ ಎಲೆಕ್ಷನ್ ನಲ್ಲಿ ಸ್ಪರ್ಧಿಸಲು ಇಷ್ಟವಿಲ್ಲ : ಪಕ್ಷದ ಆಣತಿಯಂತೆ ಕೆಲಸ ಮಾಡುತ್ತೇನೆ ವಿಜಯೇಂದ್ರ

ಕಲಬುರಗಿ: ಆರ್.ಆರ್.ನಗರ, ಶಿರಾ ಬೈ ಎಲೆಕ್ಷನ್ ಮುಗಿದ ಬೆನ್ನಲೆ ಈಗ ಬೀದರ್ ನ ಬಸವ ಕಲ್ಯಾಣ ಉಪ ಚುನಾವಣೆ ರಂಗೇರುತ್ತಿದೆ.

ಈ ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ಇಷ್ಟವಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪಷ್ಟ ಪಡಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು,ಬೀದರ್ ನ ಬಸವಕಲ್ಯಾಣದ ಟಿಕೆಟ್ ಆಕಾಂಕ್ಷಿ ನಾನಲ್ಲ, ಪಕ್ಷದ ಆಣತಿಯಂತೆ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನಿರ್ದೇಶನದಂತೆ ಕೆಲಸ ಮಾಡುವುದಾಗಿ ವಿಜಯೇಂದ್ರ ತಿಳಿಸಿದ್ದಾರೆ.

ಮಸ್ಕಿ ಮತ್ತು ಬಸವ ಕಲ್ಯಾಣ ಸೇರಿದಂತೆ ಎಲ್ಲ ಚುನಾವಣೆಗಳು ಕೂಡ ಸವಾಲುಗಳಿಂದ ಕೂಡಿದ್ದಾಗಿರುತ್ತವೆ, ಚುನವಾಣೆಯಲ್ಲಿ ಗೆಲ್ಲಲು ಕೆಲವೊಂದು ತಂತ್ರ ಬಳಸಬೇಕಾಗುತ್ತದೆ ಎಂದರು.

ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಅಧಿಕಾರ ದುರುಪಯೋಗ ಕಾರಣ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ವಿಜಯೇಂದ್ರ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಸೋಲಿನ ಹತಾಶೆಯಿಂದ ಸಿದ್ದರಾಮಯ್ಯ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದರು.

Edited By : Nirmala Aralikatti
PublicNext

PublicNext

14/11/2020 09:37 am

Cinque Terre

75.92 K

Cinque Terre

3

ಸಂಬಂಧಿತ ಸುದ್ದಿ