ಬೆಂಗಳೂರು- ನಗರದ ಹೊಸಗುಡ್ಡದಹಳ್ಳಿಯ ಕೆಮಿಕಲ್ ಗೋದಾಮಿನಲ್ಲಿ ಭಾರೀ ಪ್ರಮಾಣದ ಬೆಂಕಿ ಅನಾಹುತ ನಡೆದಿದೆ. ಅಪಾರ ಪ್ರಮಾಣದ ಹಾನಿಯೂ ಆಗಿದೆ. ಆದರೆ ಇದುವರೆಗೂ ಯಾರೊಬ್ಬ ಜನಪ್ರತಿನಿಧಿ ಕೂಡ ಆ ಕಡೆ ಸುಳಿದಿಲ್ಲ. ಇದು ಅಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆದರೂ ಇದುವರೆಗೆ ಬೆಂಕಿ ಆರ್ಭಟ ನಿಂತಿಲ್ಲ. ಸುತ್ತಲೂ ಬೆಂಕಿಯ ಕೆನ್ನಾಲಗೆ ಆವರಿಸಿಕೊಂಡ ಪರಿಣಾಮ ಕೆಲವು ಮನೆಗಳಿಗೆ ಹಾನಿಯಾಗಿದೆ. ಇಷ್ಟೆಲ್ಲ ದುರಂತ ನಡೆದು 24 ತಾಸು ಕಳೆದರೂ ಯಾವ ಜನಪ್ರತಿನಿಧಿಗಳೂ ಈ ಕಡೆ ಬಾರದಿರುವುದು ಹೊಸಗುಡ್ಡದಗಳ್ಳಿಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
PublicNext
11/11/2020 12:30 pm