ಬಾಗಲಕೋಟೆ: ಉಪಚುನಾವಣೆಯಲ್ಲಿ ಹಣ ಮತ್ತು ಅಧಿಕಾರ ಕೆಲಸ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಆರ್ ಆರ್ ನಗರ ಮತ್ತು ಶಿರಾ ಗೆಲ್ಲುತ್ತೇವೆಂಬುದು ನಮ್ಮ ನಿರೀಕ್ಷೆಯಾಗಿತ್ತು. ಆದರೆ ಅಧಿಕಾರದಲ್ಲಿರುವವರು ನನಗೆ ಮಾಹಿತಿ ದೊರೆತಂತೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಹಣದ ಹೊಳೆ ಹರಿಸಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
PublicNext
10/11/2020 04:08 pm