ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋಲುಂಡ ಕುಸುಮಾ ಮನೆಗೆ ಡಿಕೆ ಸುರೇಶ್ ಭೇಟಿ

ಬೆಂಗಳೂರು- ಆರ್ ಆರ್ ನಗರ ಉಪಚುನಾವಣೆಯಲ್ಲಿ ಸೋಲು ಕಂಡ ಕುಸುಮಾ ಅವರ ಮನೆಗೆ ಸಂಸದ ಡಿ ಕೆ ಸುರೇಶ್ ಭೇಟಿ ನೀಡಿದ್ದಾರೆ‌.

ಕುಸುಮಾ ಅವರನ್ನು ಭೇಟಿಯಾದ ಅವರು ಇದು ಉಪಚುನಾವಣೆ‌. ಎರಡೂವರೆ ವರ್ಷಗಳ ನಂತರ ನಡೆಯುವ ವಿಧಾನ ಸಭಾ ಚುನಾವಣೆಗೆ ಅಣಿಯಾಗಬೇಕಿದೆ ಎಂದಿದ್ದಾರೆ‌.

ಗೆಲ್ಲಬಹುದೆಂಬ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಆರ್ ಆರ್ ನಗರಕ್ಕೆ ಕುಸುಮಾ ಅವರನ್ನು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯಾಗಿ ಘೋಷಿಸಿತ್ತು. ಈ ಕ್ಷೇತ್ರದಲ್ಲಿ ಗೆಲ್ಲಲೇಬೆಕೆಂದು ಸವಾಲಾಗಿ ಸ್ವೀಕರಿಸಿದ್ದ ಡಿ ಕೆ ಶಿವಕುಮಾರ್ ಅವರು ಕುಸುಮಾ ಪರವಾಗಿ ಸಾಕಷ್ಟು ಪ್ರಚಾರ ಮಾಡಿದ್ದರು‌. ಆದರೆ ಗೆಲುವಿನ ವಿಚಾರದಲ್ಲಿ ಡಿಕೆ ಸಹೋದರರ ನಿರೀಕ್ಷೆ ಹುಸಿಯಾಗಿದೆ.

Edited By : Nagaraj Tulugeri
PublicNext

PublicNext

10/11/2020 03:32 pm

Cinque Terre

51.56 K

Cinque Terre

3

ಸಂಬಂಧಿತ ಸುದ್ದಿ