ವಾಷಿಂಗ್ಟನ್- ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆಲುವಿನ ನಾಗಾಲೋಟದ ಕಡೆ ನಡೆದಿದ್ದಾರೆ. ಡೊನಾಲ್ಡ್ ಟ್ರಂಪ್ ಗೆಲುವಿನ ಆಸೆ ಛಿದ್ರವಾಗಿದೆ.
ಆದ್ರೆ ಇನ್ನೇನು ಅಧಿಕೃತ ಫಲಿತಾಂಶವಷ್ಟೇ ಬಾಕಿ ಇದೆ. ಈ ಹಿನ್ನಲೆಯಲ್ಲಿ ಅಮೆರಿಕದಾದ್ಯಂತ ಹಿಂಸಾಚಾರ, ಗಲಭೆಗಳು ಭುಗಿಲೇಳುವ ಸಾಧ್ಯತೆ ಇರುವುದರಿಂದ ರಾಜಧಾನಿ ನ್ಯೂಯಾರ್ಕ್ ಸೇರಿದಂತೆ ಎಲ್ಲ ಪ್ರಾಂತ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ನಾನು ಕಾನೂನು ಹೋರಾಟ ಮಾಡಲಿದ್ದೇನೆ ಎಂದು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂಸಾಚಾರಗಳು ನಡೆಯುವ ಸಾಧ್ಯತೆಗಳನ್ನು ಗ್ರಹಿಸಿ ಅಲ್ಲಿನ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.
ಸದ್ಯದ ಫಲಿತಾಂಶದ ಪ್ರಕಾರ ಡೆಮಾಕ್ರೆಟಿಕ್ ಪಕ್ಷದ ಬೈಡೆನ್ ಒಟ್ಟು 253 ಎಲೆಕ್ಟೋರಲ್ ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ 214 ಎಲೆಕ್ಟೋರಲ್ ಮತಗಳನ್ನು ಪಡೆದಿದ್ದಾರೆ. ಅಂತಿಮ ಫಲಿತಾಂಶ ಹಾಗೂ ಅಧಿಕೃತ ಗೆಲುವಿನ ಘೋಷಣೆಗಾಗಿ ಅಮೆರಿಕ ಪ್ರಜೆಗಳು ಕುತೂಹಲದಿಂದ ಕಾಯುತ್ತಿದ್ದಾರೆ.
PublicNext
06/11/2020 08:29 am