ಗದಗ: ಇದು ಸಿದ್ಧರಾಮೋತ್ಸವ ಮಾಡುವಂಥ ಟೈಂ ಅಲ್ಲ.ರೈತರು ಕಷ್ಟದಲ್ಲಿ ಸಿಲುಕಿದಂಥ ಸಮಯದಲ್ಲಿ ಸಿದ್ಧರಾಮೋತ್ಸವ, ಶಿವಕುಮಾರೋತ್ಸವ ಪರಿಪಾಠ ಸರಿ ಅಲ್ಲ ಎಂದು ಗದಗನಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಸಿದ್ಧರಾಮೋತ್ಸವದ ಕುರಿತು ವ್ಯಂಗ್ಯವಾಡಿದ್ರು.
ಇಂದು ಗದಗ ಜಿಲ್ಲೆಗೆ ಬೆಳ್ಳಂ ಬೆಳಿಗ್ಗೆ ಭೇಟಿ ನೀಡಿ ಮಳೆ ಹಾನಿ ಪ್ರದೇಶಗಳ ವೀಕ್ಷಣೆ ನಂತರ ಮಾಧ್ಯಮಗಳೆದರು ಮಾತನಾಡಿದ ಬಿ.ಸಿ.ಪಾಟೀಲ, ರಾಜ್ಯ ಮಳೆಯಲ್ಲಿ ತತ್ತರಿಸಿರೋ ಸಮಯವಾಗಿದ್ದು ನಾವು ರೈತರ ಬಗ್ಗೆ ಚಿಂತನೆ ಮಾಡ್ತೇವೆ,ಕಾಂಗ್ರೆಸ್ ನವರಿಗೆ ಆರೋಪ ಮಾಡೋದು ಬಿಟ್ಟು ಇನ್ನೇನು ಹೇಳಲು ಸಾಧ್ಯ, ಕಷ್ಟಪಟ್ಟು ಅತ್ತೂ ಕರೆದು, ಔತಣಕ್ಕೆ ಕರೆಸಿಕೊಂಡ್ರು ಅನ್ನೋ ಹಾಗೆ, ರಾಜ್ಯಾದ್ಯಂತ ಜನ್ರು ಕರೆದುಕೊಂಡು ಬಂದು ಎಲ್ಲಿಂದಲೋ ದುಡ್ಡು ತಂದು ಖರ್ಚು ಮಾಡಿದಾರೆ.
ಹೀಗೆ ಜನ ಸೇರಿಸಿದ ತಕ್ಷಣ ಬೆಜೆಪಿಯವರಿಗೆ ಯಾಕೆ ಭಯ ಹುಟ್ಟುತ್ತೆ, ಕಾಂಗ್ರೆಸ್ ನವರಿಗೆ ಮಾಡಲು ಕೆಲಸವಿಲ್ಲ ಎಂದು ತಿರುಗೇಟು ನೀಡಿದ್ರು. ಡಿಕೆಶಿ ಹಾಗೂ ಸಿದ್ಧರಾಮಯ್ಯ ಆಲಿಂಗನ ವಿಚಾರವಾಗಿಯೂ ಪ್ರಸ್ತಾಪಿಸಿದ ಕೌರವ,ಈ ಬಗ್ಗೆ ಆರ್.ಅಶೋಕ್ ಅವರು ಧೃತರಾಷ್ಟ್ರ ಆಲಿಂಗನ ಎಂದು ಚೆನ್ನಾಗಿ ಹೇಳಿದ್ದಾರೆ, ಅವರು ಒಳ್ಳೆ ಆಡಳಿತ ಕೊಟ್ಟಿದ್ರೆ ಯಾಕೆ ವಿರೋಧ ಪಕ್ಷದಲ್ಲಿ ಇರ್ತಾಯಿದ್ರು.
ಅವರು ದುರಾಡಳಿತ ಕೊಟ್ಟಿದ್ದಕ್ಕೆ ಅಲ್ಲಿದಾರೆ. ಜನರ ಗಮನವನ್ನ ಬೇರೆಡೆ ಸೆಳೆಯಲು ಏನೆನೋ ಉತ್ಸವ ಮಾಡ್ತಾರೆ.ರಾಹುಲ್ ಗಾಂಧಿ ಉತ್ಸವ ಮಾಡಲಿ.ಸೋನಿಯಾ ಗಾಂಧಿ ಉತ್ಸವವನ್ನೂ ಮಾಡ್ಲಿ.ಆದರೆ ಜನ ಉತ್ಸವಕ್ಕೆ ಒತ್ತು ಕೊಡೋದಿಲ್ಲ, ಜನ ವೋಟ್ ಕೊಡೋದು ಕೆಲಸಕ್ಕೆ ಅಭಿವೃದ್ಧಿಗೆ ಮಾತ್ರ, ಎಂದು ಬಿ.ಸಿ.ಪಾಟೀಲ ಹೇಳಿದ್ರು.
PublicNext
09/08/2022 06:24 pm