ಬೀದರ್: ಸಕಾಲಕ್ಕೆ ರಸಗೊಬ್ಬರ ಪೂರೈಕೆ ಆಗುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡು ಕರೆ ಮಾಡಿದ ರೈತನಿಗೆ ಕೇಂದ್ರ ಸಚಿವ ಭಗವಂತ್ ಖೂಬಾ ಉಡಾಫೆಯ ಉತ್ತರ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕರೆ ರೆಕಾರ್ಡ್ ವೈರಲ್ ಆಗುತ್ತಿದೆ.
ಗೊಬ್ಬರ ಕೇಳಿದ ರೈತನಿಗೆ ಕೇಂದ್ರ ಸಚಿವ ಖೂಬಾ ಅವರು ಏರುಧ್ವನಿಯಲ್ಲಿ ಮಾತಾಡಿದ್ದಾರೆ. ನಿಮ್ಮೂರಲ್ಲಿ ಗೊಬ್ಬರ ಸಿಗದಿದ್ದರೆ ನಾನೇನು ಮಾಡಲಿ? ಹೋಗಿ ಅಧಿಕಾರಿಗಳನ್ನು ಕೇಳು. ನಾನು ಭಾರತ ಸರ್ಕಾರದ ಸಚಿವ. ಎಲ್ಲವನ್ನೂ ನಾನೇ ನೋಡಿಕೊಳ್ಳಲು ಆಗೋದಿಲ್ಲ. ನನ್ನ ಕೆಲಸ ರಾಜ್ಯಕ್ಕೆ ಕಳಿಸೋದಿದೆ, ಕಳಿಸಿದ್ದೇನೆ ಅಷ್ಟೇ. ಅಲ್ಲಿ ಶಾಸಕ ಇದಾನಲ್ಲ ಅವನನ್ನು ಕೇಳು. ಸಾವಿರಾರು ಜನ ಸರ್ಕಾರಿ ನೌಕರರು ಇದ್ದಾರೆ ಅವರನ್ನು ಕೇಳು ಎಂದಿದ್ದಾರೆ.
ಇದಕ್ಕೆ ಪ್ರತಿಯಾಗಿ ಕರೆ ಮಾಡಿದ್ದ ರೈತ ನೀವು ಈ ರೀತಿ ಮಾತಾಡಿದರೆ ಮುಂದಿನ ಚುನಾವಣೆಯಲ್ಲಿ ತಿರಸ್ಕರಿಸುತ್ತೇವೆ ಎಂದಿದ್ದಾನೆ. ಇದಕ್ಕೆ ಕುಪಿತರಾದ ಖೂಬಾ, ಮುಂದಿನ ಚುನಾವಣೆಯಲ್ಲಿ ಹೇಗೆ ಗೆಲ್ಲಬೇಕೆಂದು ನನಗೆ ಗೊತ್ತಿದೆ ಎಂದಿದ್ದಾರೆ.
PublicNext
16/06/2022 09:02 pm