ಲಖನೌ (ಉತ್ತರ ಪ್ರದೇಶ): ಕೃಷಿ ಮಾರುಕಟ್ಟೆಯಲ್ಲಿ ರೈತರು ತಮ್ಮ ಬೆಳೆಗೆ ತಾವೇ ಬೆಂಕಿ ಹಚ್ಚಿದ ದೃಶ್ಯವೊಂದನ್ನು ಹಂಚಿಕೊಂಡ ಬಿಜೆಪಿ ಸಂಸದ ವರುಣ್ ಗಾಂಧಿ, ಈ ವ್ಯವಸ್ಥೆ ನಮ್ಮ ರೈತರನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಕೃಷಿ ಮಾರುಕಟ್ಟೆಯಲ್ಲಿ ಸಮೋಧ್ ಸಿಂಗ್ ಎನ್ನುವ ರೈತರು ತಾವು ಬೆಳೆದ ಧಾನ್ಯಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಆದ್ರೆ ಸಕಾಲಕ್ಕೆ ಬೆಂಬಲ ಬೆಲೆ ಸಿಕ್ಕಿಲ್ಲ. ಹೀಗಾಗಿ ಆಕ್ರೋಶಿತರಾದ ರೈತ ತಮ್ಮ ಧಾನ್ಯಕ್ಕೆ ತಾವೇ ಬೆಂಕಿ ಹಚ್ಚಿದ್ದಾರೆ. ಈ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಉತ್ತರ ಪ್ರದೇಶದ ಕೃಷಿ ಮಾರುಕಟ್ಟೆಯೊಂದರಲ್ಲಿ ನಡೆದ ಈ ಘಟನೆಯ ದೃಶ್ಯವನ್ನು ಹಂಚಿಕೊಂಡ ವರುಣ್ ಗಾಂಧಿ ತಮ್ಮದೇ ಪಕ್ಷದ ಆಡಳಿತ ಇರುವ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
PublicNext
23/10/2021 06:47 pm