ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರದ ಸ್ಪಾನ್ಸರ್ ನಿಂದ ರೈತರ ಹೋರಾಟದಲ್ಲಿ ಹಿಂಸಾಚಾರ ನಡೆದಿದೆ : ಬೆಳಗಾವಿಯಲ್ಲಿ ಗುಡುಗಿದ ಸಾಹುಕಾರ

ಬೆಳಗಾವಿ : ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆ ವಿರೋಧಿಸಿ ರೈತರು ನಿರಂತರ ಹೋರಾಟ ಮಾಡುತ್ತಿದ್ದಾರೆ. ಮತ್ತೊಂದೆಡೆ ಇದೇ ವಿಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಬಾರೀ ಚರ್ಚೆಗಳು ನಡೆಯುತ್ತಿವೆ.

ಇದರ ಮಧ್ಯೆ ಬೆಳಗಾವಿಯ ಸಾಹುಕಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೇಂದ್ರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಹೌದು ಜನವರಿ 26 ರಂದು ದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಮಾತನಾಡಿದ ಅವರು, ಈ ಹಿಂಸಾಚಾರ ಕೇಂದ್ರ ಸರ್ಕಾರದ ಸ್ಪಾನ್ಸರ್‌ನಿಂದಲೇ ನಡೆದಿದೆ ಎಂದಿದ್ದಾರೆ. ಬಿಜೆಪಿ ಬೆಂಬಲಿಗ ನಟನೋರ್ವ ಬಾವುಟ ಹಾರಿಸಿ ಇಷ್ಟೆಲ್ಲಾ ಸಮಸ್ಯೆಗೆ ಕಾರಣನಾಗಿದ್ದಾನೆ. ಈತ ಉದ್ದೇಶಪೂರ್ವಕವಾಗಿ ರೈತರ ಹೋರಾಟ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾನೆ.ಆದರೂ ಯಶಸ್ವಿಯಾಗಿಲ್ಲ.

ನೂರಕ್ಕೆ ನೂರರಷ್ಟು ಕೇಂದ್ರ ಸರ್ಕಾರ ಕುಮ್ಮಕ್ಕಿನಿಂದಲೇ ಈ ಹಿಂಸಾಚಾರ ನಡೆದಿದೆ ಎಂದಿದ್ದಾರೆ.

ಪ್ರಧಾನಿ ಜೊತೆ ಆರೋಪಿತ ನಟನ ಫೋಟೋ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ ಆ ನಟ ಬಿಜೆಪಿ ಕಟ್ಟಾ ಕಾರ್ಯಕರ್ತ ಕೂಡಾ ಹೌದು ಆತನೇ ಜನರನ್ನು ಕರೆದುಕೊಂಡು ಹೋಗಿ ಇಷ್ಟೇಲ್ಲಾ ರಂಪಾಟ ಮಾಡಿ,ರೈತರ ಹೋರಾಟ ದಿಕ್ಕು ತಪ್ಪಿಸಲು ಯತ್ನಿಸಿ, ರೈತರ ಅಪಪ್ರಚಾರದ ಕೃತ್ಯ ಎಸಗಿದ್ದಾನೆ ಎಂದರು.

ಇನ್ನು ರೈತರ ಪ್ರತಿಭಟನೆ ಕುರಿತು ವಿದೇಶಿ ಸೆಲೆಬ್ರಿಟಿಗಳ ಟ್ವೀಟ್ ಗೆ ಬಗ್ಗೆ ವಿರೋಧ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಬೇರೆ ದೇಶದಲ್ಲಿ ಅನ್ಯಾಯವಾದಾಗ ನಾವು ಧ್ವನಿ ಎತ್ತಿಲ್ವಾ?,ಶ್ರೀಲಂಕಾದಲ್ಲಿ ಅನ್ಯಾಯವಾದಾಗ ನಮ್ಮ ದೇಶದ ಸೈನಿಕರು ಅಲ್ಲಿಗೆ ಹೋಗಿಲ್ವಾ?, ಬಾಂಗ್ಲಾದೇಶದಲ್ಲಿ ಅನ್ಯಾಯ ಆದಾಗ ಇಂದಿರಾ ಗಾಂಧಿ ಬೆಂಬಲಿಸಿ ದೇಶ ಸೆಪರೇಟ್ ಮಾಡಿಲ್ವಾ?ಬೇರೆ ದೇಶಗಳಲ್ಲಿ ಅನ್ಯಾಯವಾದಾಗ ನಮ್ಮ ದೇಶದವರು ಸಪೋರ್ಟ್ ಮಾಡಿದ್ದಾರೆ.

ಅಷ್ಟೇ ಯಾಕೆ ನಮ್ಮ ಪ್ರಧಾನಿ ಟ್ರಂಪ್ ಪರವಾಗಿ ಕ್ಯಾನ್ವಾಸ್ ಮಾಡಿಲ್ವಾ? ಬೇರೆ ದೇಶಕ್ಕೆ ಪ್ರಧಾನಿ ಮೋದಿ ಏಕೆ ಹೋಗಬೇಕು? ಇನ್ನು ನಮ್ಮ ದೇಶದ ಕೆಲವರು ಒತ್ತಡದ ಮೇಲೆ ಟ್ವೀಟ್ ಮಾಡ್ತಿದ್ದಾರೆ. ನೀವು ಟ್ವೀಟ್ ಮಾಡಿ ಅಂತಾ ಕೇಂದ್ರ ಸರ್ಕಾರವೇ ಒತ್ತಡ ಮಾಡಿದೆ ಎಂದಿದ್ದಾರೆ.

ಇನ್ನು ಸಚಿನ್ ತೆಂಡೂಲ್ಕರ್ ಕಟೌಟ್ ಗೆ ಮಸಿ ಬಳಿದು ಪ್ರತಿಭಟನೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ತೆಂಡೂಲ್ಕರ್ ಭಾವಚಿತ್ರಕ್ಕೆ ಮಸಿ ಬಳೆದು ಪ್ರತಿಭಟನೆ ಮಾಡುವುದು ಪರಿಹಾರವಲ್ಲ ಏನಾದರೂ ಒತ್ತಡ ಬಂದ್ರೆ ಸ್ವಯಂಪ್ರೇರಿತವಾಗಿ ತಮ್ಮ ಪ್ರಶಸ್ತಿಯನ್ನು ವಾಪಸ್ ಕೊಡಬೇಕು ರೈತರು, ದೇಶಕ್ಕಿಂತ ಯಾವುದೇ ಪ್ರಶಸ್ತಿ ದೊಡ್ಡದಲ್ಲ ಎಂದಿದ್ದಾರೆ.

Edited By : Nirmala Aralikatti
PublicNext

PublicNext

07/02/2021 04:12 pm

Cinque Terre

56.33 K

Cinque Terre

1

ಸಂಬಂಧಿತ ಸುದ್ದಿ