ಲಖನೌ : ರೈತರ ಪ್ರತಿಭಟನೆಯ ಬಗ್ಗೆ ಒಂದು ಮಾತನ್ನು ಆಡದ ಪ್ರಧಾನಿ ಮೋದಿ ಪರೋಕ್ಷವಾಗಿ ಮಾತನಾಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಕಾವು ಹೆಚ್ಚಾಗುತ್ತಿರುವಾಗಲೇ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿಯವರು ಹಳೆಯ ಕಾಯ್ದೆಗಳ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ.
ಶತಮಾನಗಳ ಹಿಂದಿನ ಕಾಯ್ದೆ, ಕಾನೂನುಗಳನ್ನು ಇಟ್ಟುಕೊಂಡು ದೇಶದ ಅಭಿವೃದ್ಧಿ ಸಾಧ್ಯವಿಲ್ಲ, ತಿದ್ದುಪಡಿಗಳು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.
ಸೋಮವಾರದಂದು ಆಗ್ರಾ ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಿದ ಮಾತನಾಡಿದ ಮೋದಿ 'ಅಭಿವೃದ್ಧಿಗೆ ಸುಧಾರಣೆಗಳು ಬೇಕಾಗುತ್ತವೆ.
ಹೊಸ ಆದೇಶಕ್ಕಾಗಿ ಮತ್ತು ಹೊಸ ಸೌಲಭ್ಯಗಳನ್ನು ನೀಡಲು ಸುಧಾರಣೆಗಳು ಬಹಳ ಅಗತ್ಯವಾಗಿವೆ.
ಹಿಂದಿನ ಶತಮಾನದ ಕಾನೂನುಗಳೊಂದಿಗೆ ಮುಂದಿನ ಶತಮಾನವನ್ನು ನಿರ್ಮಿಸಲು ನಮಗೆ ಸಾಧ್ಯವಿಲ್ಲ.
ಕಳೆದ ಶತಮಾನದಲ್ಲಿ ಉತ್ತಮವಾಗಿದ್ದ ಕೆಲವು ಕಾನೂನುಗಳು ಪ್ರಸ್ತುತ ಶತಮಾನದಲ್ಲಿ ಹೊರೆಯಾಗಿವೆ.
ಸುಧಾರಣೆಗಳು ನಿರಂತರ ಪ್ರಕ್ರಿಯೆಯಾಗಿರಬೇಕು' ಎಂದು ಅವರು ಹೇಳಿದರು.
ಭಾಷಣದಲ್ಲಿ ರೈತರ ಬಗ್ಗೆ ಉಲ್ಲೇಖಿಸದೆಯೇ ರೈತ ಹೋರಾಟಕ್ಕೆ ಸಂಬಂಧಿಸುವ ಮಾತುಗಳನ್ನು ಪ್ರಧಾನಿಯವರು ಹೇಳಿದ್ದಾರೆ.
PublicNext
07/12/2020 09:30 pm