ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಸವಕಲ್ಯಾಣ ಉಪಚುನಾವಣೆ: ವಿಜಯೇಂದ್ರ ಅಭ್ಯರ್ಥಿ?

ಬೀದರ್- ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ಈಗಷ್ಟೇ ಮತದಾನ ಮುಗಿದು ಫಲಿತಾಂಶವಷ್ಟೇ ಬಾಕಿ ಇದೆ‌. ಹಾಗಂತ ರಾಜಕಾರಣಿಗಳು ಘಟಾನುಘಟಿ ನಾಯಕರು ಈಗ ರೆಸ್ಟ್ ಮಾಡ್ತಾ ಇಲ್ಲ. ಅವರ ಮುಂದಿನ ಟಾರ್ಗೆಟ್ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ.

ಇತ್ತೀಚಿಗೆ ಶಾಸಕ ಬಿ. ನಾರಾಯಣ್ ರಾವ್ ಅವರ ಅಕಾಲಿಕ ನಿಧನದಿಂದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ತೆರವಾಗಿದೆ. ಹೀಗಾಗಿ ಎಲ್ಲ ರಾಜಕೀಯ ನಾಯಕರ ಗಮನ ಈ ಕ್ಷೇತ್ರದ ಮೇಲೆ ನೆಟ್ಟಿದೆ. ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಊಹಾಪೋಹ ರಾಜಕೀಯ ವಲಯದಲ್ಲಿದೆ. ಆ ಬಗ್ಗೆ ತೆರೆ ಮರೆಯ ಚರ್ಚೆಯೂ ನಡೆಯುತ್ತಿದೆ. ಆದ್ರೆ ಅಂತಿಮವಾಗಿ ಹುರಿಯಾಳು ಯಾರಾಗ್ತಾರೆ ಎಂಬುದನ್ನ ಅಭ್ಯರ್ಥಿ ಹೆಸರು ಘೋಷಣೆ ಆಗುವವರೆಗೂ ಕಾಯಬೇಕು.

Edited By : Nagaraj Tulugeri
PublicNext

PublicNext

04/11/2020 01:38 pm

Cinque Terre

42.02 K

Cinque Terre

0

ಸಂಬಂಧಿತ ಸುದ್ದಿ