ನವದೆಹಲಿ- ದೇಶದಲ್ಲಿ ಕೃಶಗೊಂಡ ಆರ್ಥಿಕ ವ್ಯವಸ್ಥೆ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಸದ್ಯದರಲ್ಲೇ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿದೆ. ಪ್ಯಾಕೇಜ್ ಬಿಡುಗಡೆ ಕುರಿತು ಹಣಕಾಸು ಇಲಾಖೆ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಸುಳಿವು ನೀಡಿದ್ದಾರೆ.
ಭೀಕರವಾಗಿ ದೇಶವನ್ನು ಕಾಡಿದ ಕೊರೊನಾ ಮಹಾಮಾರಿಯಿಂದ ದೇಶಾದ್ಯಂತ ಉದ್ಯೋಗ ನಷ್ಟಗಳಾಗಿವೆ. ಇದರ ಸರಿದೂಗಿಸಲು ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಲಿದೆ. ಇದಕ್ಕಾಗಿ ಸರ್ಕಾರ ಯೋಜನೆ ರೂಪಿಸುತ್ತಿದೆ. ತಳಮಟ್ಟದಿಂದ ಸಮಸ್ಯೆಗಳ ಅಧ್ಯಯನ ನಡೆದಿದೆ. ಯಾರಿಗೆ? ಯಾವಾಗ? ಎಷ್ಟರ ಮಟ್ಟಿಗೆ ಸಹಾಯ ಬೇಕಿದೆ ಎಂಬುದರ ಬಗ್ಗೆ ಸಚಿವಾಲಯ, ವ್ಯಾಪಾರಿ ಸಂಘಟನೆಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಈ ಮಾಹಿತಿಯನ್ನು ಆಧರಿಸಿ ಉತ್ತಮ ಪ್ಯಾಕೇಜ್ ನೀಡುವ ಉದ್ದೇಶ ಇದೆ ಎಂದು ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
PublicNext
02/11/2020 12:12 pm