ಲಖನೌ: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಗುರುವಾರ ತಮ್ಮ ಏಳು ಮಂದಿ ಬಂಡಾಯ ಶಾಸಕರನ್ನು ಅಮಾನತು ಮಾಡಿ ಆದೇಶ ನೀಡಿದ್ದಾರೆ. ರಾಜ್ಯಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನಾಗಿ ರಾಮ್ ಜೀ ಗೌತಮ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇದನ್ನು ವಿರೋಧಿಸಿದ್ದೇ ಅಮಾನತಿಗೆ ಕಾರಣ ಅಂತಾ ಹೇಳಲಾಗ್ತಾ ಇದೆ.
ಹಕೀಂ ಲಾಲ್ ಬಿಂದ್, ಚೌಧರಿ ಅಸ್ಲಂ ಅಲಿ, ಮೊಹಮ್ಮದ್ ಮೊಕ್ತಬಾ ಸಿದ್ದಿಕಿ, ಬಂದನಾ ಸಿಂಗ್ ಅಸ್ಲಂ ರೈನಿ, ಸುಷ್ಮಾ ಪಟೇಲ್, ಹರಿಗೋವಿಂದ್ ಭಾರ್ಗವ ಮತ್ತು ಮುಂತಾದ ಶಾಸಕರು ಅಮಾನತಿಗೊಳಗಾಗಿದ್ದಾರೆ. ಕಳೆದ ಬುಧವಾರ ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರನ್ನ ಬಂಡಾಯ ಶಾಸಕರು ಭೇಟಿಯಾಗಿದ್ದರು. ಹಾಗೂ ರಾಮ್ ಜೀ ಗೌತಮ್ ರನ್ನು ಆಯ್ಕೆ ಮಾಡುವಲ್ಲಿ ಬಂಡಾಯ ಶಾಸಕರ ಪೈಕಿ ನಾಲ್ವರ ಸಹಿಗಳನ್ನು ನಕಲು ಮಾಡಲಾಗಿದೆ ಎಂದು ಅಫಿಡೆವಿಟ್ ಸಲ್ಲಿಸಿದ್ದರು.
ಅಷ್ಟೇ ಅಲ್ಲ. ಉತ್ತರ ಪ್ರದೇಶ ರಾಜ್ಯಸಭೆಯ ಖಾಲಿ ಇರುವ ಹತ್ತು ಸೀಟುಗಳಿಗೆ ನವೆಂಬರ್ 9 ರಂದು ಚುನಾವಣೆ ನಡೆಯಲಿದೆ. ಚುನಾವಣಾ ಅಧಿಕಾರಿ ರಾಮ್ ಜೀ ಗೌತಮ್ ಅವರಿಂದ ನಾಮಪತ್ರ ಸ್ವೀಕರಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ 11 ಅಭ್ಯರ್ಥಿಗಳ ಪೈಕಿ, ಎಂಟು ಅಭ್ಯರ್ಥಿಗಳು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.
PublicNext
29/10/2020 03:14 pm