ಬೆಂಗಳೂರು-ಉಪಕದನದ ಪ್ರಚಾರ ಕೊನೆಹಂತಕ್ಕೆ ಬಂದಿದೆ. ಈ ಹೊತ್ತಲ್ಲಿ ಪಕ್ಷ-ವಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆ ಜೋರಾಗಿ ಸುರಿಯುತ್ತಿದೆ. ಇದರ ನಡುವೆ ಚಾಲೆಂಜ್ ಸ್ಟಾರ್ ದರ್ಶನ್ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗ್ತಾ ಇದೆ.
ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದರ್ಶನ್ ಹಾಗೂ ಯಶ್ ಸೇರಿ ಜೋಡೆತ್ತುಗಳಾಗಿ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸುವಲ್ಲಿ ಮುಂಚೂಣಿಯಲ್ಲಿದ್ರು. ಈಗ ಆರ್ ಆರ್ ನಗರದ ಬಿಜೆಪಿ ಅಭ್ಯರ್ಥಿ ಚಿತ್ರ ನಿರ್ಮಾಪಕ ಮುನಿರತ್ನ ಅವರ ಪರ ಪ್ರಚಾರಕ್ಕೆ ಬರ್ತಾರಾ ಎನ್ನುವ ಊಹಾಪೋಹಗಳು ಎದ್ದಿವೆ.
ಕಳೆದ ವರ್ಷ ಮುನಿರತ್ನ ಅವರು ನಟ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾದ ನಿರ್ಮಾಪಕರಾಗಿದ್ದರು. ಇಬ್ಬರ ನಡುವೆಯೂ ಚಿತ್ರರಂಗದ ನಂಟು ಇರೋದ್ರಿಂದ ಮುನಿರತ್ನ ಪರ ಚುನಾವಣಾ ಪ್ರಚಾರದ ಅಖಾಡಕ್ಕೆ 'ದಾಸ' ದರ್ಶನ್ ಇಳಿಯುವ ಸಾಧ್ಯತೆ ಇದೆ.
PublicNext
29/10/2020 08:29 am