ಪಾಟ್ನಾ: 'ಜಂಗಲ್ ರಾಜ್' ನಾಯಕರ ಮಕ್ಕಳು ಅಧಿಕಾರಕ್ಕೆ ಬಂದರೆ, ಕೊರೊನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ಕೂಡಿಟ್ಟಿರುವ ಹಣವನ್ನು ನುಂಗಿ ಹಾಕಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪರೋಕ್ಷವಾಗಿ ಆರ್‌ಜೆಡಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ಪಾಟ್ನಾ, ಮುಜಫರ್‌ಪುರ್‌ದಲ್ಲಿ ಸರಣಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಮೊದಲು ಮುಜಫರ್‌ಪುರ್‌ದಲ್ಲಿ ಮಾತನಾಡಿದ ಅವರು, 'ಬಿಹಾರ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ. 15 ವರ್ಷಗಳ ಕಾಲ 'ಜಂಗಲ್ ರಾಜ್' ಆಳ್ವಿಕೆಗೆ ಕಾರಣರಾದವರು ರಾಜ್ಯವನ್ನು ಲೂಟಿ ಮಾಡುತ್ತಾರೆಯೇ ವಿನಃ ಬಿಹಾರದ ಅಭಿವೃದ್ಧಿಗೆ ಶ್ರಮಿಸುವುದಿಲ್ಲ' ಎಂದು ವಿಪಕ್ಷಗಳನ್ನು ಕುಟುಕಿದರು.
PublicNext
28/10/2020 04:55 pm