ಬೆಳಗಾವಿ : ರಾಜ್ಯ ರಾಜಕಾರಣದಲ್ಲಿ ಒಂದಿಲ್ಲೊಂದು ಬದಲಾವಣೆಗಳು ನಡೆಯುತ್ತಲೇ ಇವೆ ಸದ್ಯ ಬೈ ಎಲೆಕ್ಷನ್ ಒಂದು ಬೆಸ್ಟ್ ಉದಾಹರಣೆ
ತೆರವಾದ ಕ್ಷೇತ್ರಗಳಿಗೆ ಮರು ಚುನಾವಣೆ ನಡೆಯುವ ಪ್ರಮೇಯ ನಿಲ್ಲುವಂತೆ ಕಾಣುತ್ತಿಲ್ಲ.
ಸದ್ಯ ಕೇಂದ್ರ ಸಚಿವರಾಗಿದ್ದ ದಿ.ಸುರೇಶ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಯಲ್ಲಿ ಸುರೇಶ ಅಂಗಡಿ ಕುಟುಂಬ ಹೊರತು ಪಡಿಸಿ ಟಿಕೆಟ್ ನೀಡಿದರೆ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ನಾನು ಸಿದ್ಧ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಪ್ರಕಾಶ ಹುಕ್ಕೇರಿ ಸುರೇಶ ಅಂಗಡಿ ಬಿಜೆಪಿಯಲ್ಲಿ ಇದ್ದರೇ ನಾನು ಕಾಂಗ್ರೆಸ್ ನಲ್ಲಿ ಇದ್ದೆವು. ಆದರೆ ಇಬ್ಬರು ನಾವು ಗಳಸ್ಯ-ಕಂಠಸ್ಯ ಸ್ನೇಹಿತರು.
ಇಂದು ಸ್ನೇಹಿತ ನಮ್ಮ ಜೊತೆ ಇಲ್ಲದೇ ಇರುವುದು ಅತ್ಯಂತ ದುಃಖದ ಸಂಗತಿ.
ದಿ.ಸುರೇಶ ಅಂಗಡಿ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದರೆ ನಾನು ಯಾವ ಪಕ್ಷದಿಂದಲೂ ಟಿಕೆಟ್ ಕೇಳುವುದಿಲ್ಲ. ಆದ್ರೆ ಅಂಗಡಿ ಕುಟುಂಬ ಹೊರತು ಪಡಿಸಿ ಟಿಕೆಟ್ ನೀಡಿದರೆ ನಾನು ಸ್ಪರ್ಧಿಸಲು ಸಿದ್ಧನಿದ್ದೇನೆ. ಕಾಂಗ್ರೆಸ್ ಅಥವಾ ಬಿಜೆಪಿ ಯಾರೇ ಟಿಕೆಟ್ ಕೊಟ್ಟರು ಸೈ ಎಂದರು.
ಒಟ್ಟಾರೆ ಕಾಂಗ್ರೆಸ್ ನಿಂದ ಎಂಎಲ್ ಸಿಯಾಗಿ, ಶಾಸಕನಾಗಿ, ಸಚಿವನಾಗಿ, ಸಂಸದನಾಗಿ ಆಯ್ಕೆ ಆಗಿರುವ ಪ್ರಕಾಶ ಹುಕ್ಕೇರಿ ಈ ದಿಢೀರ್ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿದೆ.
PublicNext
27/10/2020 09:39 am