ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಸಿಎಂ ಬಂಗಾರಪ್ಪ ಸ್ಮಾರಕಕ್ಕೆ 1 ಕೋಟಿ

ಶಿವಮೊಗ್ಗ-ಜನಪರ ಚಿಂತನೆಯ ನಾಯಕ ಮಾಜಿ ಸಿಎಂ ಬಂಗಾರಪ್ಪ ಅವರ ಸ್ಮಾರಕ ನಿರ್ಮಿಸಲು ₹1ಕೋಟಿ ನೀಡಲು ಸೂಚಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ದಿವಂಗತ ಎಸ್. ಬಂಗಾರಪ್ಪ ಅವರ 87ನೇ ಜನ್ಮಸ್ಮರಣೆ ಹಾಗೂ ಸೊರಬ ಪಟ್ಟಣದಲ್ಲಿ ನಿರ್ಮಿಸಲಾದ ನೂತನ ಉದ್ಯಾನವನ್ನು ಆನ್ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು‌.

ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ಸಮಾಜಮುಖಿ ಧೋರಣೆಯುಳ್ಳವರಾಗಿದ್ದರು. ತಮ್ಮ ಜನಪರ ಚಿಂತನೆಗಳ ಮೂಲಕ ಮತ್ತು ಯೋಜನೆಗಳ ಮೂಲಕ ಇಂದಿಗೂ ನಾಡಿನ ಜನತೆಯಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.

ಅವರ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಸ್ಮಾರಕ ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ₹ 1ಕೋಟಿ ಅನುದಾನ ನೀಡಲು ಸೂಚಿಸಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

26/10/2020 12:47 pm

Cinque Terre

96.64 K

Cinque Terre

11

ಸಂಬಂಧಿತ ಸುದ್ದಿ