ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳೆಯ ದನಿ ಅಡಗಿಸಲು ಸಾಧ್ಯವಿಲ್ಲ : ಬೆಳಗಾವಿಯಲ್ಲಿ ಗುಡುಗಿದ ಲಕ್ಷ್ಮೀ

ಬೆಳಗಾವಿ: ಬೈ ಎಲೆಕ್ಷನ್ ಕಾವು ಹೆಚ್ಚಾಗುತ್ತಿದೆ ಆರ್.ಆರ್. ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ವಾತಾವರಣ ಚೆನ್ನಾಗಿದೆ ಇದರ ಮಧ್ಯೆ ಆರ್.ಆರ್. ನಗರದ ಅಭ್ಯರ್ಥಿ ಕುಸುಮಾ ಪರವಹಿಸಿ ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದ್ದಾರೆ.

ಕಾಂಗ್ರೆಸ್ ಪಕ್ಷದವರು ಯಾವ ಅಭ್ಯರ್ಥಿಯನ್ನು ನಿರ್ಲಕ್ಷ್ಯ ಮಾಡಲ್ಲ.

ಆರ್.ಆರ್. ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟರಾದ ಯಶ್ ಮತ್ತು ದರ್ಶನ್ ಪ್ರಚಾರ ಮಾಡಲು ಬರುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿರುವ ಲಕ್ಷ್ಮೀ ಹೆಬ್ಬಾಳ್ಕರ್ ಜೋಡೆತ್ತುಗಳು ನಿಂತುಕೊಳ್ಳಲಿ, ಎಲ್ಲರೂ ಬರಲಿ ಎಂದರು.

ಕುಸುಮಾ ವಿರುದ್ಧ ಕೇಸ್ ದಾಖಲಾಗಿರುವ ವಿಚಾರವಾಗಿ ಮಹಿಳೆಯ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಅಭ್ಯರ್ಥಿ ಓರ್ವ ಮಹಿಳೆ ಇದ್ದಾರೆಂದು ಕೇಸ್ ಹಾಕಿದ್ದಾರೆ.

ಅವರು ಸೋಲುತ್ತಾರೆ ಅನ್ನೋ ಭಯ ಶುರುವಾಗಿದೆ. ಹಾಗಾಗಿ, ಕೇಸ್ ದಾಖಲಿಸಿ ಬೆದರಿಸುವ ತಂತ್ರ ಮಾಡುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Edited By : Nirmala Aralikatti
PublicNext

PublicNext

18/10/2020 10:38 pm

Cinque Terre

32.68 K

Cinque Terre

2

ಸಂಬಂಧಿತ ಸುದ್ದಿ