ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೇ ದಿನ ಮುನಿರತ್ನಗೆ ಡಬಲ್ ಸಿಹಿ ಸುದ್ದಿ

ಬೆಂಗಳೂರು: ಆರ್‌ಆರ್‌ ನಗರ ಚುನಾವಣಾ ಆಕ್ರಮ ಆರೋಪ ಹಿನ್ನೆಲೆಯಲ್ಲಿ ಮುನಿರತ್ನ ಅವರ ವಿರುದ್ಧ ದಾಖಲಿಸಲಾಗಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಈ ಮೂಲಕ ಮುನಿರತ್ನ ಅವರಿಗೆ ರಾಜಕೀಯ ದಾರಿ ಸುಗಮವಾಗಿದೆ. ಈ ಬೆನ್ನೆಲ್ಲೇ ಮುನಿರತ್ನ, ಸ್ವೀಟ್ ತೆಗೆದುಕೊಂಡು ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಕೋರ್ಟ್ ಆದೇಶ ಬಗ್ಗೆ ವಿವರಿಸಿದ್ದಾರೆ.

ಈ ವೇಳೆ 'ಆಲ್‌ ದಿ ಬೆಸ್ಟ್ ಗೆದ್ದು ಬನ್ನಿ' ಎಂದು ಸಿಎಂ ಯಡಿಯೂರಪ್ಪ ಅವರು ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಈ ಮೂಲಕ ಆರ್‌ಆರ್‌ ನಗರ ಉಪಚುನಾವಣೆ ಟಿಕೆಟ್ ಮುನಿರತ್ನ ಅವರಿಗೆ ಫಿಕ್ಸ್ ಆದಂತಾಗಿದ್ದು, ಇಂದು ಸಂಜೆ ಅಧಿಕೃತ ಘೋಷಣೆಯಾಗಲಿದೆ ಎನ್ನಲಾಗಿದೆ.

ಸಿಎಂ ಯಡಿಯೂರಪ್ಪ ಅವರ ಭೇಟಿ ಬಳಿಕ ಮಾತನಾಡಿದ ಮುನಿರತ್ನ ಅವರು, ಮುಖ್ಯಮಂತ್ರಿಗಳು ಭೋಜನಕ್ಕೆ ಆಹ್ವಾನಿಸಿದ್ದರು. ಹೀಗಾಗಿ ಅವರನ್ನು ಇಂದು ಭೇಟಿಯಾಗಿರುವೆ. ಆರ್‌ಆರ್‌ ನಗರ ಟಿಕೆಟ್ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದರು.

Edited By : Vijay Kumar
PublicNext

PublicNext

13/10/2020 04:16 pm

Cinque Terre

44.36 K

Cinque Terre

2

ಸಂಬಂಧಿತ ಸುದ್ದಿ