ಬೆಂಗಳೂರು: ಪಕ್ಷ ವಿರೋಧಿ ನಡವಳಿಕೆ ತೋರಿರುವ ಕೇರಳ ಜೆಡಿಎಸ್ ಶಾಸಕ ಸಿ.ಕೆ ನಾಣು ಅವರ ನೇತೃತ್ವದ ಜೆಡಿಎಸ್ ಘಟಕವನ್ನು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸೋಮವಾರ ವಿಸರ್ಜಿಸಿದ್ದಾರೆ.
ಈ ಕುರಿತು ಆದೇಶ ಪತ್ರವನ್ನು ಟ್ವೀಟ್ ಮಾಡಿರುವ ದೇವೇಗೌಡರು, ಪಕ್ಷದ ಸಂಘಟನಾತ್ಮಕ ಕಾರ್ಯಗಳ ಮೇಲುಸ್ತುವಾರಿ ವಹಿಸಲು ಮಧ್ಯಂತರ ರಾಜ್ಯ ಘಟಕ ರಚನೆ ಮಾಡಲಾಗಿದ್ದು, ಈ ಕೂಡಲೇ ಜಾರಿಗೆ ಬರುವಂತೆ ಮಾಜಿ ಸಚಿವ ಮಾಥ್ಯು ಟಿ ಥಾಮಸ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪಕ್ಷದ ಅಧ್ಯಕ್ಷರಾಗಿದ್ದ ಸಿ.ಕೆ ನಾಣು ಅವರು ಪಕ್ಷವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ವಿವರಣೆ ಕೋರಿ ಪಕ್ಷವು ನೀಡಿದ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದ್ದಾರೆ.
ಸಿ.ಕೆ ನಾಣು ಅವರನ್ನು ಕಳೆದ ವರ್ಷ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ವಡಗರ ಕ್ಷೇತ್ರದಿಂದ ಅವರು ವಿಧಾನಸಭೆಗೆ ಜೆಡಿಎಸ್ ಚಿಹ್ನೆಯಡಿ ಆಯ್ಕೆಯಾಗಿದ್ದಾರೆ.
PublicNext
12/10/2020 08:11 pm