ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ಕರ್ತವ್ಯ ಲೋಪ ಕಳಂಕ ತಳ್ಳಿಹಾಕಿದ ಶ್ರೀರಾಮುಲು

ಬೆಂಗಳೂರು : ರಂಗೇರುತ್ತಿದೆ ಬೈ ಎಲೆಕ್ಷನ್ ಕಣ ಇದರ ರಾಜ್ಯ ರಾಜಕೀಯದಲ್ಲಿ ಏಕಾಏಕಿಯಾಗಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿವೆ.

ಈ ರೀತಿಯ ದಿಢೀರ್ ಬೆಳವಣಿಗೆಯ ಪರಿಣಾಮ ಆರೋಗ್ಯ ಸಚಿವ ಶ್ರೀರಾಮುಲು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ತನ್ನ ಖಾತೆ ಬದಲಾವಣೆ ಸಂಬಂಧ ಶ್ರೀರಾಮುಲು ಅವರು ನಿನ್ನೆ ರಾತ್ರಿಯೇ ಮುಖ್ಯಮಂತ್ರಿಗೆ ದೂರವಾಣಿ ಕರೆ ಮಾಡಿ ಚರ್ಚೆ ನಡೆಸಿದ್ದಾರೆ.

ಇಂದು ಬೆಳಗ್ಗೆ ಭೇಟಿ ಮಾಡುವಂತೆ ಶ್ರೀರಾಮುಲುಗೆ ಸಿಎಂ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ರಾತ್ರಿ ಸಿಎಂ ಜೊತೆಗಿನ ದೂರವಾಣಿ ಕರೆ ವೇಳೆ ಬೇಸರ ಹೊರಹಾಕಿರುವ ಸಚಿವ, ಕೊರೊನಾ ನಿರ್ವಹಣೆಯಲ್ಲಿ ವಿಫಲನಾಗಿದ್ದೇನೆಂಬ ಹಣೆ ಪಟ್ಟಿ ಬರೋದು ಬೇಡ.

ಈ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬೇಡಿ. ಸ್ವಲ್ಪ ಸಮಯ ಕೊಡಿ, ನಾನೇ ಆರೋಗ್ಯ ಇಲಾಖೆ ಬಿಟ್ಟು ಕೊಡುತ್ತೇನೆ ಎಂದು ಸಿಎಂ ಬಳಿ ರಾಮುಲು ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಸಿಎಂ ಬಿಎಸ್ ವೈ ಅವರನ್ನು ಖುದ್ದು ಭೇಟಿ ಮಾಡಿ ಚರ್ಚೆ ನಡೆಸಲಿದ್ದು, ಶ್ರೀರಾಮುಲು ಮನವೊಲಿಕೆ ಮಾಡ್ತಾರಾ ಸಿಎಂ? ಅಥವಾ ತಮ್ಮ ನಿರ್ಧಾರದಂತೆ ಖಾತೆ ಬದಲಾವಣೆ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Edited By : Nirmala Aralikatti
PublicNext

PublicNext

12/10/2020 10:35 am

Cinque Terre

49.43 K

Cinque Terre

1

ಸಂಬಂಧಿತ ಸುದ್ದಿ