ಹರಿಯುವ ನೀರಿನಲ್ಲಿ ಕಾರು ಸಮೇತ ವ್ಯಕ್ತಿಯೊಬ್ಬ ಕೊಚ್ಚಿಹೋಗಿರುವ ಘಟನೆ ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಕ್ರಾಸ್ ಬಳಿ ನಡೆದಿದೆ. ತಿಪಟೂರು ತಾಲ್ಲೂಕು ಗಡಬನಹಳ್ಳಿಯ ಪಟೇಲ್ ಕುಮಾರ್ (70) ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿಯಾಗಿದ್ದಾರೆ.
ಪಟೇಲ್ ಕುಮಾರ್ ಸ್ನೇಹಿತ ಪುಟ್ಟಸಿದ್ದಯ್ಯನ ಜೊತೆ ಓಮಿನಿ ಕಾರಿನಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗಿ ವಾಪಾಸು ಬರುವ ವೇಳೆ ತಂಬಿ ಹರಿಯುತ್ತಿದ್ದ, ಕೊಂಡಜ್ಜಿ ಹಳ್ಳ ದಾಟುವ ವೇಳೆ ಈ ಅವಘಡ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ಪುಟ್ಟಸಿದ್ದಯ್ಯ ಪ್ರಣಾಪಾಯದಿಂದ ಪಾರಾಗಿದ್ದು, ಕಾರಿನಲ್ಲಿದ್ದ ಪಟೇಲ್ ಕುಮಾರ್ ಕಾರಿನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ನಾಪತ್ತೆಯಾದ ಪಟೇಲ್ ಕುಮಾರ್ ಶೋಧ ಕಾರ್ಯ ಮುಂದುವರೆದೆ. ಸ್ಥಳದಲ್ಲಿ ಎಸಿ ಕಲ್ಪಶ್ರೀ,ಇಒ ಸತೀಶ್, ಕಂದಾಯ ಇಲಾಖೆ ಅಧಿಕಾರಿಗಳು ಮೊಕ್ಕಂ ಹೂಡಿದ್ದಾರೆ.
PublicNext
04/08/2022 01:14 pm