ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾದಿಂದ ಕೊನೆಯುಸಿರೆಳೆದ ಹಾಸ್ಯ ನಟ ವೇಣುಗೋಪಾಲ್ ಕೊಸುರಿ

ಕೋವಿಡ್ – 19 ನಿಂದ ಬಳಲುತ್ತಿದ್ದ ತೆಲುಗಿನ ಖ್ಯಾತ ಹಾಸ್ಯ ನಟ ವೇಣುಗೋಪಾಲ್ ಕೊಸುರಿ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತೇಜಿಸಿದ್ದಾರೆ.

ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ 23 ರಂದು ಇಹಲೋಕ ತ್ಯಜಿಸಿದ್ದಾರೆ.

ತಮ್ಮದೇ ಆದ ವಿಶಿಷ್ಟ ಮ್ಯಾನರಿಸಂ, ಹಾಗು ನಟನಾ ಸೈಲಿಯಿಂದ ಸಾಕಷ್ಟು ಅಭಿಮಾನಿಗಳನ್ನೊಂದಿರುವ ನಟ ವೇಣುಗೋಪಾಲ್ ಮೂಲತಃ ಪಶ್ಚಿಮ ಗೋದಾವರಿಯ ನರಸಾಪುರದವರು.

‘ಚಲೋ’, ‘ಪಿಲ್ಲಾ ಜಮೀನ್ದಾದರ್’, ‘ಮರ್ಯಾದ ರಾಮಣ್ಣ’, ಸೇರಿದಂತೆ ಸಾಕಷ್ಟು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಮರ್ಯಾದ ರಾಮಣ್ಣ’ ಸಿನಿಮಾ ವೇಣುಗೋಪಾಲ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟ ಸಿನಿಮಾವಾಗಿದೆ.

ಮೃತರಿಗೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.

Edited By : Nirmala Aralikatti
PublicNext

PublicNext

24/09/2020 02:54 pm

Cinque Terre

68.87 K

Cinque Terre

0

ಸಂಬಂಧಿತ ಸುದ್ದಿ