ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತಯಾಚಿಸುತ್ತಲೇ ಮತದಾರನನ್ನು ಮದುವೆಯಾದ ಅಭ್ಯರ್ಥಿ

ಕೊಟ್ಟಾಯಂ : ಭರ್ಜರಿ ಚುನಾವಣೆ ಪ್ರಚಾರದಲ್ಲಿರುವ ಅಭ್ಯರ್ಥಿಯೋರ್ವರು ಮತಯಾಚನೆ ಮಾಡುತ್ತಲೇ ಮತದಾರನನ್ನು ವರಸಿದ ಘಟನೆ ಕೇರಳದ ಕೊಟ್ಟಾಯಂನ ವೈಕೋಮ್ ಎಂಬಲ್ಲಿ ನಡೆದಿದೆ.

ಇಲ್ಲಿ ಮದುವೆಯಾಗ ಯುವತಿ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಲಾವಣ್ಯ.

15ನೇ ವಾರ್ಡಿನಿಂದ ಎಲ್ ಡಿಎಫ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಲಾವಣ್ಯ, ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಇದರ ನಡುವೆಯೇ ಶರತ್ ಎನ್ನುವವರ ಜತೆ ಹಸಮಣೆ ಏರಿರುವ ಇವರು, ಬಂದವರ ಬಳಿಯೆಲ್ಲಾ ಮತಯಾಚಿಸಿದ್ದಾರೆ.

ಉಡುಗೊರೆಯೇ ಆಶೀರ್ವಾದ ಎಂದು ಲಗ್ನಪತ್ರಿಕೆಯಲ್ಲಿ ಬರೆಯುವುದು ಸಾಮಾನ್ಯ. ಆದರೆ ಈಕೆ ನಿಮ್ಮ ಮತವೇ ನನಗೆ ನೀಡುವ ಆಶೀರ್ವಾದ ಎಂದು ಹೇಳುತ್ತಲೇ ಮದುವೆ ಮನೆಯಲ್ಲಿಯೂ ಮತಯಾಚಿಸಿದ್ದಾರೆ.

ಇಂಟರೆಸ್ಟಿಂಗ್ ವಿಷಯ ಎಂದರೆ, ಈಕೆಯ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿರುವವರೆಲ್ಲರೂ, ರಾಜಕೀಯವಾಗಿ ವಿರೋಧಿಗಳಾಗಿದ್ದರೂ, ಮದುವೆಗೆ ಬಂದು ಶುಭ ಹಾರೈಸಿ ಹೋಗಿದ್ದಾರೆ.

ಫೆಬ್ರವರಿ 2 ರಂದು ಲಾವಣ್ಯ ನಿಶ್ಚಿತಾರ್ಥ ನೆರವೇರಿತ್ತು. ಮದುವೆಯನ್ನು ಮೇ 10 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಮದುವೆ ದಿನಾಂಕವನ್ನು ಮುಂದೂಡಲಾಯಿತು.

Edited By : Nirmala Aralikatti
PublicNext

PublicNext

24/11/2020 07:06 pm

Cinque Terre

60.79 K

Cinque Terre

1

ಸಂಬಂಧಿತ ಸುದ್ದಿ