ಗದಗ: ಜಿಲ್ಲೆ ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಸೋಮವಾರ ರಾತ್ರಿಯಿಡಿ ಸುರಿದ ರಣರಕ್ಕಸ ಮಳೆಗೆ ಹಲವಾರು ಮನೆಗಳಿಗೆ ಬಾರಿ ಪ್ರಮಾಣದ ನೀರು ನುಗ್ಗಿದ್ದರಿಂದ ಮನೆಯಲ್ಲಿರುವ ಮಕ್ಕಳು,ವೃದ್ಧರು,ಪರದಾಡಿದರು. ಮನೆಯಲ್ಲಿರುವ ದವಸ ಧಾನ್ಯಗಳು, ಮಾಡಿದ ಅಡುಗೆಯೂ ನೀರು ಪಾಲಾಗಿದ್ದರಿಂದ ಕೆಲವರು ರಾತ್ರಿ ಉಪವಾಸ, ವನವಾಸ ಅನುಭವಿಸಿದ್ದಾರೆ.
ಬಾರಿ ಪ್ರಮಾಣದ ನೀರು ನುಗ್ಗಿದ ಮನೆಗಳಿಗೆ ಭೇಟಿ ನೀಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೈನಾಜ್ ಮುಜಾವರ್ ಕಂದಾಯ ಇಲಾಖೆ ಗ್ರಾಮಲೆಕ್ಕಾಧಿಕಾರಿ ಎನ್ ಎನ್ ದೊಡಮನಿ. ಹಾನಿಗೊಳಗಾದ ಮನೆಗಳ ಪರಿಶೀಲನೆ ಮಾಡಿ ಅರ್ಜಿ ಸ್ವಿಕರಿಸಿದರು.
PublicNext
07/09/2022 11:20 am