ಕನಕಪುರ: ತಾಲೂಕಿನ ಹಾರೋಹಳ್ಳಿಯ ಅತ್ತಿಗುಪ್ಪೆ ಗ್ರಾಮದಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಹುಟ್ಟಿಸಿದ ಘಟನೆ ಗುರುವಾರ ನಡೆದಿದೆ. ಗ್ರಾಮದ ಜಮೀನೊಂದರಲ್ಲಿ ಮೊಸಳೆ ಅಸ್ವಸ್ಥವಾದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದು ಅದನ್ನು ಕಂಡ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಆನೇಕಲ್ ವನ್ಯಜೀವಿ ಪ್ರದೇಶದ ಅರಣ್ಯಾಧಿಕಾರಿಗಳು ಮೊಸಳೆಯನ್ನು ಹಿಡಿದು ಸರಕ್ಷಿತವಾದ ಸ್ಥಳಕ್ಕೆ ಬಿಡುವ ಕೆಲಸ ಮಾಡಿದ್ದಾರೆ.
ಸುಬೇದಾರ್ ಕೆರೆದೊಡ್ಡಿ ಗ್ರಾಮದ ಕೆರೆಯಲ್ಲಿ ಈ ಮೊಸಳೆ ಇದ್ದು ಹೆಚ್ಚು ಮಳೆಯಾದ್ದರಿಂದ ಹಳ್ಳದ ಮೂಲಕ ಬಂದಿದೆ ಜನರು ಗಾಬರಿಗೊಳ್ಳುವ ಅಗತ್ಯ ಇಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವರದಿ : ಎಲ್.ಜಿ.ಜಯರಾಮನಾಯಕ್ ಪಬ್ಲಿಕ್ ನೆಕ್ಸ್ಟ್ ಕನಕಪುರ
PublicNext
01/09/2022 09:55 pm