ರಾಮನಗರ: ಮಳೆಯಿಂದ ಹಲವಾರು ಅನಾಹುತಗಳು ಸಂಭವಿಸುತ್ತಿವೆ. ಬೆಂಗಳೂರಷ್ಟೆ ಅಲ್ಲದೇ ಹೊರಹೊಲಯದ ರಾಮನಗರ ಕೂಡ ಸಂಪೂರ್ಣ ನೀರಿನಿಂದ ಮುಳುಗಡೆಯಾಗಿದೆ. ಜನಜೀವನ ಅಸ್ಥವ್ಯಸ್ತವಾಗಿದ್ದು, ವಡೇರಳ್ಳಿ, ಮಧುರಾ ಗರ್ಮೆಂಟ್ಸ್ ರಸ್ತೆ,ರಂಗರಾಯನ ದೊಡ್ಡಿ, ಹೀಗೆ ರಾಮನಗರ ಮಳೆಯ ನೀರಿನಿಂದ ಆವೃತವಾಗಿದೆ. ರಸ್ತೆಗಳು, ಹೊಲ-ಗದ್ದೆಗಳೆಲ್ಲ ಪೂರ್ತಿ ಮುಳುಗಡೆಯಾಗಿದೆ.
ವಾಹನಗಳು ಸವಾರರು ಸಂಚರಿಸಲು ತತ್ತರಿಸಿದ್ದಾರೆ. ಈ ದೃಶ್ಯದಲ್ಲಿ ಕಾಣುತ್ತಿರುವ ಹಾಗೆ ನಿಜಕ್ಕೂ ಮಳೆಯಿಂದ ಜನರು ಹೈರಾಣಾಗಿದ್ದಾರೆ.
ಗದ್ದೆಗಳಲ್ಲಿ ನೀರು ನಿಂತು ಸಂಪೂರ್ಣ ಬೆಳೆ ನಾಶವಾಗಿದೆ. ಮಕ್ಕಳು ಶಾಲೆಗೆ ಹೋಗುವುದಕ್ಕು ತೊಂದರೆಯಾಗಿದ್ದು, ಬೆಳಿಗ್ಗೆಯಿಂದ ಸುರಿಯುತ್ತಿರುವು ಮಳೆಗೆ ರಸ್ತೆಯೆಲ್ಲ ಕೆರೆಗಳಂತಾಗಿವೆ. ಟ್ರಾಫಿಕ್ ಜಾಮ್ ಕೂಡ ಜಾಮ್ ಉಂಟಾಗಿದ್ದು, ಇನ್ನೂ ಬಿಡದಿ ಇಂದ ರಾಮನಗರಕ್ಕೆ ಹೋಗುವ ದಾರಿಯಲ್ಲಿ ವಾಹನಗಳೆಲ್ಲ ಮುಳುಗಡೆಯಾಗಿದೆ
ಕೆರೆಯ ಕಟ್ಟೆಗಳು ಒಡೆದು ರಬಸವಾಗಿ ಕೆರೆಯ ನೀರು ಗ್ರಾಮಗಳಿಗೆ ಹಾಗೂ ರಸ್ತೆಗಳಿಗೆ ನುಗ್ಗಿತ್ತಿರುವುದು ಆತಂಕದ ವಿಷಯ. ಇನ್ನೂ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಿಎಂ ಬೊಮ್ಮಾಯಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಂಜಾಗ್ರತೆಯಿಂದ ಆ ವ್ಯಾಪ್ತಿಯ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ.
ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
29/08/2022 10:26 pm