ಭುವನೇಶ್ವರ: ಬಿಳಿ ಹುಲಿ, ಕಪ್ಪು ಪಟ್ಟಿಯ ಕೇಸರಿ ಹುಲಿಯನ್ನು ನಾವು-ನೀವೆಲ್ಲ ನೋಡಿದ್ದೇವೆ. ನಮ್ಮ ದೇಶದ ಹಲವೆಡೆ ಬಿಳಿ ಹುಲಿಗಳಿವೆ. ಆದ್ರೆ ಈಗ ಕಪ್ಪು ಹುಲಿ ಇರುವುದು ಪತ್ತೆಯಾಗಿದೆ.
ಹೌದು.. ಒಡಿಶಾದ ಸಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನದ ಕಾಡಿನಲ್ಲಿ ಈ ವಿರಳಾತಿವಿರಳ ಕಪ್ಪು ಹುಲಿ ಕಾಣಿಸಿಕೊಂಡಿದೆ. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದ ಅವರು ಈ ಅಪರೂಪದ ದೃಶ್ಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ದೃಶ್ಯದಲ್ಲಿ ಕಪ್ಪು ಹುಲಿಯು ಮರವನ್ನು ಪರಚುತ್ತ ಮರ ಏರಲು ಯತ್ನಿಸಿದೆ. ನಂತರ ಅಲ್ಲಿಂದ ಮುಂದೆ ಸಾಗಿದೆ.
PublicNext
31/07/2022 06:28 pm