ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ದಲ್ಲಾಳಿ ಅಂಗಡಿಗೆ ಬಂದ ನಾಗರ ಹಾವು!

ಗದಗ: ನಾಗರ ಪಂಚಮಿಯ ಅಮವಾಸ್ಯೆ ದಿನದಂದು ದಲ್ಲಾಳಿ ಅಂಗಡಿಗೆ ನಾಗರ ಹಾವು ಬಂದಿರುವ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದ APMC ಯಲ್ಲಿ ನಡೆದಿದೆ.

ಹೌದು APMC ಯಾರ್ಡ್ ನಲ್ಲಿರುವ ಸುರೇಶ್ ಪಟ್ಟೇದ್ ಎಂಬುವವರ ದಲ್ಲಾಳಿ ಅಂಗಡಿಯಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿದೆ. ನಾಗರ ಹಾವು ಕಂಡು ಅಂಗಡಿಯ ಮಾಲೀಕರು ಹಾಗೂ ಕೆಲಸಗಾರರು ಭಯ ಭೀತರಾಗಿದ್ದಾರೆ. ತಕ್ಷಣ ಉರಗ ತಜ್ಞ ಸ್ನೇಕ್ ಬುಡ್ಡಾಗೆ ಕರಿಸಿ ನಾಗರ ಹಾವು ರಕ್ಷಣೆ ಮಾಡಿದ್ದಾರೆ.

ಇನ್ನು ನಾಗರ ಹಾವು ಹಿಡಿದು ಕೆಲವು ಹೊತ್ತು ಸ್ನೇಕ್ ಬುಡ್ಡಾ ಅವರು ಆಟವಾಡಿಸಿದ್ದಾರೆ. ನಂತ್ರ ಸ್ನೇಕ್ ಬುಡ್ಡಾ ಅವರು ನಿರ್ಜನ ಪ್ರದೇಶಕ್ಕೆ ನಾಗರ ಹಾವು ಬಿಟ್ಟು ಬಂದಿದ್ದಾರೆ.

ವರದಿ.ಸುರೇಶ ಲಮಾಣಿ ಪಬ್ಲಿಕ್ ನೆಕ್ಸ್ಟ ಗದಗ

Edited By : Manjunath H D
PublicNext

PublicNext

29/07/2022 12:07 pm

Cinque Terre

34.58 K

Cinque Terre

0