ಹರಿಯಾಣ: ಮನೆಯ ಎರಡು ಗೋಡೆಗಳ ನಡುವೆ ಸಿಲುಕಿದ್ದ ನಾಗರ ಹಾವಿನ ಜೀವ ಉಳಿಸಿಲು ಮನೆಯ ಗೋಡೆಯನ್ನೇ ಕೆಡವಿದ ಘಟನೆ ಹರಿಯಾಣದ ಫತೇಹಾಬಾದ್‌ನ ತೊಹಾನಾ ಪ್ರದೇಶದಲ್ಲಿ ನಡೆದಿದೆ.
ಹೌದು. ಇಂತಹವೊಂದು ಘಟನೆಯ ವೀಡಿಯೋ ಸದ್ಯ ಟ್ವಿಟರ್ ನಲ್ಲಿ ಹರಿದಾಡುತ್ತಿದೆ.ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯ ನವಜೋತ್ ಧಿಲ್ಲೋನ್ ಇಡೀ ಕಾರ್ಯಾಚರಣೆ ಬಗ್ಗೆ ಸಾಮಾಜಿಕ ತಾಣದಲ್ಲಿ ವಿವರಣೆ ನೀಡಿದ್ದಾರೆ.
ಹಾವಿನ ಸಂರಕ್ಷಣೆಗೆ ಬೇರೆ ದಾರಿನೇ ಇರಲಿಲ್ಲ. ಆದರೆ, ಇದಕ್ಕೆ ಮನೆಯ ಮಾಲೀಕರು ಸಪೋರ್ಟ್ ಮಾಡಿದರು. ಅವರ ಅನುಮತಿ ಪಡೆದುಕೊಂಡೇ ಗೋಡೆ ಮತ್ತು ಮೇಲ್ಛಾವಣಿ ಕೆಡವಲಾಗಿದೆ. ಇದೇ ವೇಳೆ ಜನ ಕೂಡ ಹಾವನ್ನ ನೋಡಲು ಮನೆ ಬಳಿ ಬಂದರು ಅಂತಲೇ ಜವಜೋತ್ ಧಿಲ್ಲೋನ್ ಹೇಳಿದ್ದಾರೆ.
PublicNext
19/07/2022 08:09 pm