ಹಾವೇರಿ:ನೋಡನೋಡುತ್ತಲೇ ಕಣ್ಣೆದುರೇ ಕುಸಿದುಬಿದ್ದ ಮನೆ, ಲಕ್ಷಾಂತರ ರೂಪಾಯಿ ಬೈಕ್ ಜಖಂ. ಹೌದು. ಹಾವೇರಿ ಜಿಲ್ಲೆಯಾದ್ಯಂತ ವರುಣನ ಅಬ್ಬರ ಜೋರಾಗಿದೆ. ಸತತ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ.
ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ನೋಡನೋಡುತ್ತಲೇ ಕಣ್ಣೆದುರೆ ಮನೆಯೊಂದು ನೆಲಕಚ್ಚಿದೆ. ಗೋಡೆ ಬಿದ್ದ ರಭಸಕ್ಕೆ ಪಕ್ಕದಲ್ಲಿದ್ದ ಎರಡು ಬೈಕ್ ಗಳು ಜಖಂಗೊಂಡಿವೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗೊಡೆ ಬೀಳುತ್ತಿರುವ ದೃಶ್ಯವನ್ನು ನೋಡಿ ಅಲ್ಲಿನ ಜನರು ಗಾಬರಿಯಾಗಿದ್ದಾರೆ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ, ನಿಲ್ಲದ ವರುಣನ ಅಬ್ಬರಕ್ಕೆ ಇನ್ನಷ್ಟು ಹಾನಿಯಾಗುತ್ತದೆಯೋ ಗೊತ್ತಿಲ್ಲ. ಆದರೆ ಪ್ರತಿನಿತ್ಯ ಜಿಲ್ಲೆಯಲ್ಲಿ ಒಂದಲ್ಲ ಒಂದು ಅನಾಹುತ ಸಂಭವಿಸುತ್ತಲೇ ಇದೆ.
PublicNext
18/07/2022 12:15 pm