ಶಿರಾ: ತಾಲೂಕಿನ ಕಳಂಬೆಳ್ಳ ಮತ್ತು ಮದಲೂರು ಕೆರೆಗೆ ನೀರು ಹರಿಸುವ ಉದ್ದೇಶದಿಂದ ಇಂದು ಶಾಸಕ ರಾಜೇಶ್ ಗೌಡ ಪತ್ರಾವತನಹಳ್ಳಿ ಕಾಲುವೆ ಮೂಲಕ ಶಿರಾ ಭಾಗಕ್ಕೆ ಹೇಮಾವತಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಸತತವಾಗಿ ನಾಲ್ಕು ತಿಂಗಳು ಹೇಮಾವತಿ ನೀರು ಶಿರಾ ಭಾಗಕ್ಕೆ ಹರಿಯಲಿದ್ದು, ಶಿರಾ ತಾಲೂಕಿನ ಹಲವಾರು ಕೆರೆಗಳು ಭರ್ತಿ ಮಾಡುವ ಗುರಿ ಹೊಂದಲಾಗಿದೆ ಎಂದು ಶಾಸಕ ರಾಜೇಶ್ ಗೌಡ ಹೇಳಿದರು. ನೀರು ಹರಿಸುವ ವಿಚಾರದಲ್ಲಿ ಶಿರಾ ವಿಧಾನಸಭಾ ಕ್ಷೇತ್ರ ಹೆಚ್ಚು ಚರ್ಚೆಯಲ್ಲಿ ಇದ್ದು, ಈಗ ಶಿರಾ ಕ್ಷೇತ್ರದ ಕೆರೆಗಳಿಗೆ ನೀರು ಹರಿಯುತ್ತಿರುವುದು ರೈತರ ಮೊಗದಲ್ಲಿ ಖುಷಿ ಮೂಡಿಸಿದೆ.
ಈ ಸಂದರ್ಭ ಶಾಸಕರೊಂದಿಗೆ ರೇಷ್ಮೆ ಉದ್ಯಮ ನಿಗಮ ಮಾಜಿ ಅಧ್ಯಕ್ಷ ಎಸ್. ಆರ್. ಗೌಡ, ನಗರಸಭೆ ಅಧ್ಯಕ್ಷ ಅಂಜಿನಪ್ಪ, ಉಪಾಧ್ಯಕ್ಷರಾದ ಅಂಬುಜ ನಟರಾಜ್, ಸೂಡಾ ಅಧ್ಯಕ್ಷ ಮಾರುತೇಶ್, ನಗರಸಭೆ ಸದಸ್ಯರಾದ ಎಸ್.ಎಲ್. ರಂಗನಾಥ್, ಮಂಜೇಶ್, ವಿಜಯಕುಮಾರ್, ಶ್ರೀನಿವಾಸ್, ನಗರ ಬಿಜೆಪಿ ಅಧ್ಯಕ್ಷ ವಿಜಯರಾಜು, ಗ್ರಾಮಾಂತರ ಅಧ್ಯಕ್ಷ ರಂಗಶಾಮಯ್ಯ, ನಗರಸಭೆ ಆಯುಕ್ತ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
PublicNext
17/07/2022 10:16 pm