ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಕಬಿನಿ ಶಕ್ತಿಮಾನ್ ಇನ್ನಿಲ್ಲ

ಮೈಸೂರು: ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ನಿಧನವಾಗಿದೆ. ಬಂಡೀಪುರ ವ್ಯಾಪ್ತಿಯ ಗುಂಡ್ರೆ ಅರಣ್ಯದಲ್ಲಿ ಆನೆಯ ಕಳೆಬರಹ ಪತ್ತೆಯಾಗಿದೆ.

ಕಬಿನಿ ಹಿನ್ನಿರಿನಲ್ಲಿ ಪ್ರವಾಸಿಗರಿಗೆ ದರ್ಶನ ನೀಡುತ್ತಿದ್ದ ಭೋಗೇಶ್ವರ ವಯೋಸಹಜವಾಗಿ ನಿಧನವಾಗಿದೆ. 60 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದ ಕಬಿನಿಯ ಹಿರಿಯಣ್ಣ ಸುಮಾರು 4 ಅಡಿಗೂ ಉದ್ದದ ನೀಳ ದಂತ, ಸುಂದರ ನಡಿಗೆ ಮೂಲಕವೇ ಪ್ರಾಣಿಪ್ರಿಯರ ಮನಗೆದ್ದಿದ್ದ ಕಾಡಾನೆಯಾಗಿತ್ತು.

ವಿಶೇಷ ದಂತವನ್ನು ಹೊಂದಿದ್ದ ಈ ಆನೆ ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ಕಾಣಸಿಗುತ್ತಿತ್ತು. ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನಲ್ಲಿ ಕಬಿನಿ ಮಿಸ್ಟರ್ ಎಂದೇ ಖ್ಯಾತಿ ಹೊಂದಿದ್ದ ಭೋಗೇಶ್ವರ ಗಂಡಾನೆ ಶನಿವಾರ ನಿಧನವಾಗಿರುವ ವಿಚಾರ ಪ್ರಾಣಿಪ್ರಿಯರಿಗೆ ನೋವನುಂಟು ಮಾಡಿದೆ.

ಸದ್ಯ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಅರಣ್ಯ ಇಲಾಖೆ ಅಂತ್ಯಕ್ರಿಯೆ ನಡೆಸಿದೆ.

Edited By :
PublicNext

PublicNext

12/06/2022 11:20 am

Cinque Terre

76.4 K

Cinque Terre

8