ಧಾರವಾಡ: ಜೂನ್ ತಿಂಗಳ ಆರಂಭದ ಎರಡನೇ ದಿನವೇ ಧಾರವಾಡಕ್ಕೆ ಮಳೆರಾಯನ ಆಗಮನವಾಗಿದೆ. ಗುರುವಾರ ಮಧ್ಯಾಹ್ನ ಧಾರವಾಡದಲ್ಲಿ ಗುಡುಗು ಸಹಿತ ಅಬ್ಬರದ ಮಳೆಯಾಗಿದೆ.
ಜೂನ್ ತಿಂಗಳ ಆರಂಭದ ಹಿನ್ನೆಲೆಯಲ್ಲಿ ರೈತ ಸಮುದಾಯ ಮುಂಗಾರು ಬಿತ್ತನೆಗೆ ಸಜ್ಜಾಗಿದ್ದಾರೆ. ಬಿತ್ತನೆಗೆ ಬೇಕಾದ ಬೀಜ, ಗೊಬ್ಬರವನ್ನೂ ಖರೀದಿ ಮಾಡುತ್ತಿದ್ದಾರೆ. ಈಗಾಗಲೇ ಅಲ್ಲಲ್ಲಿ ಬಿತ್ತನೆ ಕಾರ್ಯ ಕೂಡ ಆರಂಭಗೊಂಡಿದೆ.
ಮಳೆಯ ನಿರೀಕ್ಷೆಯಲ್ಲಿದ್ದ ರೈತ ಸಮುದಾಯಕ್ಕೆ ಇಂದು ಸುರಿದ ಮಳೆ ಮಂದಹಾಸ ಮೂಡಿಸಿದೆ. ಬಿತ್ತನೆ ನಂತರ ಹಾಗೂ ಬಿತ್ತನೆ ಪೂರ್ವ ಮಳೆಯ ಅವಶ್ಯಕತೆ ಇತ್ತು. ಇಂದು ಮಧ್ಯಾಹ್ನದ ಹೊತ್ತಿಗೆ ಗುಡುಗು ಸಹಿತ ಮಳೆ ಸುರಿದಿದ್ದು, ಇಡೀ ರೈತ ಸಮುದಾಯ ಸಂತಸಪಡುವಂತಾಗಿದೆ.
PublicNext
02/06/2022 04:34 pm