ಬೆಂಗಳೂರು: ಹಾವಿನ ದ್ವೇಷ ಹನ್ನೆರಡು ವರ್ಷ ಅಂತಾರೆ. ಹಾಗೆಯೇ ನಾಯಿ ಪ್ರೀತಿಸಲು & ದ್ವೇಷಿಸಲು ಪ್ರಾರಂಭಿಸಿದರೆ ಜೀವದ ಕೊನೆ ಉಸಿರಿನವರೆಗೂ ಬಿಡೋದಿಲ್ಲ. ಹೌದು ಇಲ್ಲೊಂದು ನಾಯಿ ತನ್ನ ತಾಯಿಯನ್ನು ಕೊಂದ ಸೈರನ್ನಿನೊಂದಿಗೆ ಬರುವ ವಾಹನಗಳ ಮೇಲಿನ ದ್ವೇಷ ಸಾಧನೆಗೆ 1ವರ್ಷದಿಂದ ಹೋರಾಡ್ತಿದೆ. ಮಾನವತ್ವ ಮರೆತು ಸೈರನ್ನಿನೊಂದಿಗೆ ಬಂದಾತ ನಾಯಿಯನ್ನು ಕೊಂದು ಹೋಗಿದ್ದ.ಆದ ಕಾರಣ ಇಲ್ಲೊಂದು ನಾಯಿ ಸೈರನ್ನಿನೊಂದಿಗೆ ಬರುವ ಕಾರುಗಳ ಮೇಲೆ ದ್ವೇಷ ಸಾಧಿಸಲು ವರ್ಷದಿಂದ ಹೊಂಚು ಹಾಕ್ತಿದೆ.
ಯಾವ ರೀತಿ ಆ್ಯಂಬುಲೆನ್ಸ್ ಮತ್ತು ಪೊಲೀಸ್ ವಾಹನವನ್ನು ಅಟ್ಟಾಡಿಸಿಕೊಂಡು ನಾಯಿಅಟ್ಯಾಕ್ ಮಾಡ್ತಿದೆ ಎಂದು. ಈ ಘಟನೆ ನಡೆದಿರುವುದು ಕಾರಾವಾರ ಜಿಲ್ಲೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದ ಟೋಲ್ ಬಳಿ. ಒಂದು ವರ್ಷದ ಹಿಂದೆ ವಿಐಪಿ ಲೇನ್ ನಲ್ಲಿ ಸೈರನ್ನಿನೊಂದಿಗೆ ಬಂದ ವಾಹನ ಈ ಗಂಡು ನಾಯಿಯ ತಾಯಿಗೆ ಗುದ್ದಿತ್ತು. ತಾಯಿ ನಾಯಿ ಗಾಯಗೊಂಡು ಸಾವನ್ನಪ್ಪಿತ್ತು. ಕಳೆದ ಒಂದು ವರ್ಷದ ಹಿಂದೆ ಘಟನೆ ನಡೆದಿದ್ದರು ಅದನ್ನ ಮರೆಯಲಾಗದ ಮರಿ ಈಗ ತಾಯಿನಾಯಿಗಾಗಿ ತಾಯಿ ಕೊಂದ ಪಾಪಿಗಳ ವಿರುದ್ಧ ದ್ವೇಷಸಾಧನೆಗೆ ಮುಂದಾಗ್ತಿದೆ.
ಮನುಷ್ಯ ಮಾನವೀಯತೆ ಮರೆಯಬಾರದು. ನಾಯಿ ಸೇರಿದಂತೆ ಪ್ರಾಣಿಗಳು ಮೃಗತ್ವವನ್ನು ಮೈಗೂಡಿಸಿಕೊಂಡರೆ ಜೀವಸಂಕುಲ ಉಳಿಯಲು ಸಾದ್ಯವೇ.!? ಮನುಷ್ಯ ಬದುಕಲು ಸಹಜೀವಿಗಳ ಜೊತೆ ಒಡನಾಟ ಮುಖ್ಯ. ಪ್ರಕೃತಿ ಧರ್ಮದ ಜೊತೆ ಮನುಷತ್ವ ಸಮನ್ವಯತೆ ಸಾಧಿಸಬೇಕು. ಇಲ್ಲವಾದರೆ ಮನುಷ್ಯ ಸೇರಿದಂತೆ ಜೀವಸಂಕುಲಕ್ಕೆ ಅಪಾಯ ಅಂತಾರೆ ಪ್ರಾಣಿಪ್ರೇಮಿ.
ನಾಯಿಯ ದ್ವೇಷಕ್ಕೆ ತಾಯಿ ನಾಯಿಯ ಸಾವು ಕಾರಣ. ಸೈರನ್ನಿನೊಂದಿಗೆ ಕಾರು ಕಾಣಿಸಿಕೊಂಡರೆ ದ್ವೇಷಿಸೋ ನಾಯಿಗೆ ಟೋಲ್ ಸಿಬ್ಬಂದಿ ಕಂಡರೆ ಎಲ್ಲಿಲ್ಲದ ಪ್ರೀತಿ. ನಮ್ಮ ಸುತ್ತಮುತ್ತ ಇಂತಹ ಪ್ರೀತಿಯಿಂದ ಕಾಣೋ ಮೂಖಪ್ರಾಣಿಗಳ ಜೊತೆ ಮನುಷ್ಯ ನಿಯತ್ತಾಗಿರಬೇಕು. ಸಣ್ಣ ಮೈಮರೆವು ಅನೇಕ ಜೀವಿಗಳನ್ನು ಬಲಿ ತೆಗೆದುಕೊಂಡು ಆ ದುರಂತ ಮತ್ತಷ್ಟು ಕೋಪ ದ್ವೇಷಸಾಧನೆಗೆ ಕಾರಣ ಆಗಬಹುದು.ಈ ರೀತಿಯ ದುರಂತ ಮುಂದೆ ಆಗದಿರಲಿ.
PublicNext
22/05/2022 06:41 pm