ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ : ದೇವರಗಡ್ಡಿಯಲ್ಲಿ ಸಿಡಿಲು ಬಡಿದು ಮನೆ ಸಂಪೂರ್ಣ ಭಸ್ಮ.!

ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಹುಣಸಗಿ ತಾಲ್ಲೂಕಿನಲ್ಲಿ ಭಾರೀ ಗಾಳಿ ಮಳೆ ಹಾಗೂ ಸಿಡಿಲಿನ ಹೊಡೆತಕ್ಕೆ ಜನರು ನಲುಗಿ ಹೋಗಿದ್ದಾರೆ.

ತಾಲ್ಲೂಕಿನ ಜಂಗಿನಗಡ್ಡಿ (ದೇವರಗಡ್ಡಿ) ಗ್ರಾಮದಲ್ಲಿ ಇಂದು ಸಿಡಿಲು ಬಡಿದು ಮನೆಯೊಂದು ಸಂಪೂರ್ಣ ಸುಟ್ಟು ಭಸ್ಮಗೊಂಡಿದೆ.

ರೈತ ಶಿವಪ್ಪ ಗೆದ್ದಲಮರಿ ಅವರಿಗೆ ಸೇರಿದ ಮನೆಗೆ ಸಿಡಿಲು ಬಡಿಡಿದ್ದು, ಗೃಹಪಯೋಗಿ ವಸ್ತು ಹಾಗೂ ಕೃಷಿಗೆ ಸಂಭಂದಿಸಿದ ಸಾಮಾನುಗಳು ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯ ಸಂಭವಿಸಿಲ್ಲ.

ಇನ್ನು ಸ್ಥಳಕ್ಕೆ ಗ್ರಾಮ ಲೇಖಾಧಿಕಾರಿ ಅಪ್ಪಣ್ಣ, ನಾರಾಯಣಪುರ ಗ್ರಾಪಂ ಅಧ್ಯಕ್ಷ ಆಂಜನೇಯ ದೊರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಸಿಡಿಲಿನ ಬಡಿತಕ್ಕೆ ಈ ಬಡ ಕುಟುಂಬ ಕಂಗಲಾಗಿದ್ದು, ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

-ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By : Shivu K
PublicNext

PublicNext

19/05/2022 07:38 pm

Cinque Terre

68 K

Cinque Terre

0