ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರ : ರಣ ಮಳೆಗೆ ಬಾಳೆ, ಮಾವು ಬೆಳೆ ಹಾಳು : ಸಂಕಷ್ಟದಲ್ಲಿ ಅನ್ನದಾತ

ಲಕ್ಷ್ಮೇಶ್ವರ : ತಾಲೂಕಿನಾದ್ಯಂತ ಸುರಿದ ಭಾರಿ ಮಳೆ ಗಾಳಿಗೆ ಬಾಲೇಹೊಸೂರು ಗ್ರಾಮ ಸಮೀಪದಲ್ಲಿ ಹಲವಾರು ಬಾಳೆತೋಟ ಮಾವಿನ ತೋಟಗಳು ಹಾನಿಯಾಗಿವೆ.

ಮಳೆ ಗಾಳಿಯ ರಭಸಕ್ಕೆ ರೈತರ ಹೊಲದಲ್ಲಿನ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ಹನುಮಂತಪ್ಪ ಸಾಂಗ್ಲಿ ಎಂಬುವವರ ನಾಲ್ಕು ಎಕರೆ ಜಮೀನು ಹಾಗೂ ಶಿವಾನಂದ ನಾಲ್ವಡಿ ಎಂಬುವವರ ಎರೆಡು ಎಕರೆ ಜಮೀನಿನಲ್ಲಿನ ತೋಟದಲ್ಲಿ ಬೆಳೆದ ಮಾವಿನಕಾಯಿಗಳು ನೆಲಕ್ಕೆ ಬಿದ್ದು ಹಾಳಾಗಿವೆ.

ಇತ್ತ ದತ್ತಾತ್ರೇಯ ಕಟ್ಟಿಮನೆ ಎಂಬುವವರ ಎರೆಡು ಎಕರೆ ಜಮೀನಿನಲ್ಲಿ ಬಾಳೆ ಬೆಳೆ ಹಾಗೂ ಹನುಮಂತಪ್ಪ ಎಂಬುವವರ ಮೂರು ಎಕರೆ ಬಾಳೆ ಬೆಳೆ ಕರಿಯಪ್ಪ ಎಂಬ ರೈತರ ಎರೆಡು ಎಕರೆ ಬಾಳೆ ಬೆಳೆ ಗಾಳಿ ಮಳೆ ರಭಸಕ್ಕೆ ಸಿಕ್ಕು ನೆಲಕ್ಕೆ ಉರುಳಿದ್ದು ರೈತರಿಗೆ ಅಪಾರ ನಷ್ಟ ಉಂಟಾಗಿದೆ.

ಮಳೆಗೆ ಬೆಳೆ ಹಾನಿಯಾದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ರೈತ ಸಂಘಟನೆಗಳು ಹಾಗೂ ಬೆಳೆ ಹಾನಿಗೊಳಗಾದ ರೈತರ ಒತ್ತಾಯ ಮಾಡುತ್ತಿದ್ದಾರೆ.

ಸದ್ಯ ಸ್ಥಳಕ್ಕೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಐ.ನಧಾಪ್ ಅವರು ಹಾನಿಯಾದ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆಯುತ್ತಿದ್ದಾರೆ.

Edited By : Shivu K
PublicNext

PublicNext

13/05/2022 03:25 pm

Cinque Terre

36.41 K

Cinque Terre

0

ಸಂಬಂಧಿತ ಸುದ್ದಿ