ಹಾಸನ: ಹಾಸನದ ಮಲೆನಾಡು ಭಾಗದಲ್ಲಿ ಮತ್ತೆ ಮಾನವ ಮತ್ತು ಕಾಡೆನೆ ಸಂಘರ್ಷ ಮುಂದುವರೆದಿದೆ. ಕಾಡಾನೆ ತುಳಿತಕ್ಕೆ ಕೆಂಪೆಹಾನಲ್ ಗ್ರಾಮದ ರವಿ (40) ಎಂಬ ಕಾರ್ಮಿಕ ಬಲಿಯಾಗಿದ್ದಾನೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಗಾಳಿಗುಡ್ಡ ಗ್ರಾಮದ ದಿವಾನ್ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 20 ಕಾರ್ಮಿಕರ ಮೇಲೆ ಏಕಾಏಕಿ ದಾಳಿ ಮಾಡಿದ ಒಂಟಿ ಸಲಗ ಕಾರ್ಮಿಕರೊಬ್ಬರನ್ನು ತುಳಿದು ಸಾಯಿಸಿದೆ.
ಇನ್ನು ಸಲಗ ದಾಳಿಗೆ ಬೇಸತ್ತ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡುವಂತೆ ಒತ್ತಾಯಿಸಿದ್ದಾರೆ.
PublicNext
10/05/2022 10:49 pm