ಹಾಸನ: ಮನೆಯೊಂದರ ಮುಂದೆ ಬಂದ ಕಾಡಾನೆ ಸುಮಾರು ಒಂದು ತಾಸು ನಿಂತಲ್ಲೇ ನಿಂತಿದೆ. ಇದರಿಂದ ಮನೆಯವರಲ್ಲಿ ಕೆಲಕಾಲ ಆತಂಕ ಕಾಡಿತ್ತು. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದೋನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎಸ್ಟೇಟ್‌ನಲ್ಲಿದ್ದ ಈ ಮನೆಗೆ ಆಹಾರ ಅರಸುತ್ತ ಆನೆ ಬಂದಿದ್ದ ಮನೆಯ ಮುಂದೆ ಇದ್ದ ಬಾಳೆ ಗಿಡಗಳನ್ನ ತಿಂದು ಹಾಕಿದೆ.
ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಇದರಿಂದ ಕಾಫಿ ಬೆಳೆಗಾರರು ಹಾಗೂ ರೈತರು ಕಂಗಾಲಾಗಿದ್ದಾರೆ. ಹೆಚ್ಚಾಗಿ ಆನೆಗಳು ಓಡಾಡುವ ಪ್ರದೇಶಗಳಲ್ಲಿಕಾಫಿ ತೋಟಗಳ ಕೆಲಸಗಾರರು ಕೆಲಸಕ್ಕೆ ಬರೋದನ್ನೇ ಬಿಟ್ಟಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಕಾಡಾನೆಳನ್ನು ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
PublicNext
21/03/2022 12:41 pm