ಸ್ಪೇನ್: ವೇಗವಾಗಿ ಬೀಸಿದ ಗಾಳಿಯು ಮೆಡಿಟರೇನಿಯನ್ ದಾಟಿ ಸಹಾರಾ ಮರುಭೂಮಿಯಿಂದ ಧೂಳನ್ನು ಹೊತ್ತು ತಂದ ಪರಿಣಾಮ ಸ್ಪೇನ್‌ನ ಕೆಲವು ಭಾಗಗಳಲ್ಲಿನ ಆಕಾಶವು ಕಿತ್ತಳೆ ಬಣ್ಣಕ್ಕೆ ತಿರುಗಿದೆ.
ಸೆಲಿಯಾ ಚಂಡಮಾರುತವು ಸಹಾರಾ ಮರುಭೂಮಿಯಿಂದ ಸ್ಪೇನ್‌ನ ದಕ್ಷಿಣ ಭಾಗಗಳಿಗೆ ಧೂಳನ್ನು ತಂದಿತು. ಇದರಿಂದಾಗಿ ಮ್ಯಾಡ್ರಿಡ್ ಮತ್ತು ಮುರ್ಸಿಯಾ ಸ್ಥಳಗಳಲ್ಲಿ ಆಕಾಶವು ಕಿತ್ತಳೆ ಬಣ್ಣಕ್ಕೆ ತಿರುಗಿತು. ಈ ದೃಶ್ಯವನ್ನು ಸೆರೆ ಹಿಡಿದ ಕೆಲವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
PublicNext
15/03/2022 07:55 pm