ಕೊಪ್ಪಳ: ಐತಿಹಾಸಿಕ ಪೌರಾಣಿಕ ಹಿನ್ನೆಲೆಯ ಆನೆಗೊಂದಿ ಕೋಟೆಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಜನವಸತಿ ಪ್ರದೇಶದಲ್ಲೇ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನ ಆತಂಕಗೊಂಡಿದ್ದಾರೆ. ಆನೇಹೊಸೂರಿನ ನಾಗರಾಜ ಅವರ ಡ್ರೋನ್ ಕ್ಯಾಮೆರಾದಲ್ಲಿ ಚಿರತೆಯ ದೃಶ್ಯ ಸೆರೆಯಾಗಿದೆ.
ಲಿಂಗಸಗೂರು ತಾಲೂಕಿನ ಆನೆಹೊಸೂರು ಗ್ರಾಮದ ನಾಗರಾಜ ಅವರು ಆನೆಗೊಂದಿ ಹಾಗು ಅಂಜನಾದ್ರಿಗೆ ಭೇಟಿ ನೀಡಿದಾಗ ಇಲ್ಲಿಯ ಪರಿಸರವನ್ನು ಡ್ರೋನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದರು. ಈ ವೇಳೆ ಆನೆಗೊಂದಿ ಕೋಟೆಯಲ್ಲಿ ಚಿರತೆ ಓಡಾಟ ಕಂಡುಬಂದಿದೆ. ಈ ಭಾಗದಲ್ಲಿ ಕೆಲವು ಚಿರತೆಗಳಿವೆ ಎನ್ನಲಾಗಿದೆ. ಈ ಹಿಂದೆ ಚಿರತೆ ಹಿಡಿಯಲು ಜಿಲ್ಲಾಡಳಿತ ಸ್ಪೆಷಲ್ ಟೀಮ್ ಕರೆಸಿತ್ತು. ಆಗ ನಾಲ್ಕು ಚಿರತೆಗಳನ್ನು ಸೆರೆ ಹಿಡಿಯಲಾಗಿತ್ತು. ಈಗ ಮತ್ತೆ ಚಿರತೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ.
PublicNext
29/11/2021 11:30 am