ದಾವಣಗೆರೆ: ಮಳೆಯಿಂದಾಗಿ ರಸ್ತೆ ಬದಿ ನಿಲ್ಲಿಸಿದ್ದ ಕಾರು ರಸ್ತೆ ಬದಿಯ ಗುಂಡಿಯಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯರು ಕಾರು ಮೇಲಕ್ಕೆತ್ತಲು ಹರಸಾಹಸಪಟ್ಟ ಘಟನೆ ನಗರದ ಕೆಟಿಜೆ ನಗರ ರಸ್ತೆಯಲ್ಲಿ ನಡೆದಿದೆ. ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ನೆಲ ಕೂಡ ನೆನೆದಿದ್ದು, ರಸ್ತೆ ಬದಿ ನಿಲ್ಲಿರುವ ಕಾರ್ ಕುಸಿಯುತ್ತಿವೆ. ದಾವಣಗೆರೆ ಕೆಟೆಜೆ ನಗರ ರಸ್ತೆಯಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿಯೂ ಕೂಡ ನಿಲ್ಲಿಸಿದ್ದ ಕಾರೊಂದು ನಿಧಾನವಾಗಿ ಕ್ಷಣಕ್ಷಣಕ್ಕು ಕುಸಿಯುತ್ತಿತ್ತು. ಚಕ್ರಗಳು ಮಣ್ಣಲ್ಲಿ ಸಿಲುಕಿಕೊಂಡಿದ್ದವು.
ಇದನ್ನ ಗಮನಿಸಿದ ಸ್ಥಳೀಯರು ನಂತರ ಕಾರನ್ನು ಹರಸಾಹಸಪಟ್ಟು ಮೇಲಕ್ಕೆತ್ತಿದ್ದಾರೆ ಇದರಿಂದ ವಾಹನಗಳ ಪಾರ್ಕಿಂಗ್ ಮಾಡುವುದಕ್ಕೂ ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಬಳಿ ಸುಳಿಯಲು ಜನರು ಭಯಪಡುವಂತಹ ಸ್ಥಿತಿ ಉಂಟಾಗಿದೆ. ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
22/11/2021 03:33 pm