ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೋಡಿ ಹೊಡೆದ ಕೆರೆಯ ರೌದ್ರ ನರ್ತನ, ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಬೆಂಗಳೂರು: ನಗರದಲ್ಲಿ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು 66 ಎಕರೆ ವಿಸ್ತೀರ್ಣವಿರುವ ಸಿಂಗಾಪುರ ಕೆರೆ ಕೋಡಿ ಹೊಡೆದ ಪರಿಣಾಮ ಕಳೆದ 2 ವರ್ಷಗಳ ಹಿಂದಿನಂತೆ ಅಪಾರ್ಟ್ಮೆಂಟ್ ಮತ್ತು ಲೇಔಟ್ ಗೆ ಸತತವಾಗಿ ನೀರು ನುಗ್ಗುತ್ತಲೇ ಇದೆ. ನೀರು ಜಲಪಾತದಂತೆ ಹರಿಯುತ್ತಿರುವ ರಭಸಕ್ಕೆ ಡಾಂಭರು ಕಿತ್ತುಹೋಗಿ ರಸ್ತೆ, ನೀರಿನಲ್ಲಿ ಕುಸಿದು ಕೊಚ್ಚಿಹೋಗುವುದನ್ನು ಕಂಡು ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

ನೀರಿನ ರಭಸಕ್ಕೆ ರಸ್ತೆ 4 ಅಡಿ ಕುಸಿದಿದ್ದು ಈ ಅನಾಹುತಗಳ ಮಧ್ಯೆ ಹಾವು ಮೀನನ್ನು ನುಂಗುವ ದೃಶ್ಯ ಕಂಡು ಜನ ಹೌಹಾರಿದ್ದಾರೆ. ನೀರಿನಲ್ಲಿ ಕಾಣಿಸಿಕೊಳ್ಳುತ್ತಿರುವ ಹಾವುಗಳಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗುತ್ತಿದೆ.

Edited By : Manjunath H D
PublicNext

PublicNext

22/11/2021 02:43 pm

Cinque Terre

21.31 K

Cinque Terre

0